This is the title of the web page
This is the title of the web page
Business News

ಊಟ, ತಿಂಡಿ, ಟೀ,ಕಾಫಿ ಬೆಲೆಯಲ್ಲಿ ಭಾರಿ ಏರಿಕೆ


K2‌ ನ್ಯೂಸ್ ಡೆಸ್ಕ್ : ರಾಜ್ಯದಲ್ಲಿ ಈಗಾಗಲೇ ವಿದ್ಯುತ್, ತರಕಾರಿ, ಅಕ್ಕಿ, ಬೇಳೆ ಕಾಳುಗಳ ಬೆಲೆಗಳು ಗಗನಕ್ಕೇರಿದ್ದು, ಹೊಟೇಲ್ ಉದ್ಯಮವನ್ನ ಸಂಕಷ್ಟಕ್ಕೆ ದೂಡಿದೆ ಇದರ ಜೊತೆ ವಿದ್ಯುತ್, ಹಾಲಿನ ದರ ಏರಿಕೆ ಬರೆ ಮಾಲೀಕರನ್ನ ಕಂಗೆಡಿಸಿದೆ. ಹೀಗಾಗಿ ನಷ್ಟ ಸರಿದೂಗಿಸಲು ಅನಿವಾರ್ಯವಾಗಿ ಆಗಸ್ಟ್ 1 ರಿಂದ ಹೋಟೆಲ್ ಊಟ, ತಿಂಡಿ, ಟೀ,ಕಾಫಿ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತಿದೆ.

ಬಿಸಿ ಬೇಳೆಬಾತ್ 45 ರಿಂದ 55 ರೂ, ರೈಸ್ ಪೂರಿ 45 ರಿಂದ 50 ರೂ. ಮಸಾಲೆ ದೋಸೆ 60 ರೂ., ಉದ್ದಿನ ವಡೆ 15 ರೂ. ಪೂಳಿಯೊಗರೆ 40-50 ರೂ., ಇಡ್ಲಿ ವಡೆ 30 ರಿಂದ 50 ರೂ.ವರೆಗೆ, ಟಿ ಮತ್ತು ಕಾಫಿ 12 ರಿಂದ 15 ರೂ. ಬಾದಾಮಿ ಹಾಲು 18 ರೂಗೆ ಏರಿಕೆ ಮಾಡಲಾಗುತ್ತದೆ. ಕರ್ಡ್ ರೈಸ್ 45-55 ರೂಗೆ ಏರಿಕೆಯಾಗಲಿದೆ.

ಅನ್ನಸಾಂಬಾರ್ 50 ರೂ. ನಿಂದ 60 ಕ್ಕೆ ಏರಿಸಲಾಗಿದೆ. ಫುಲ್ ಮೀಲ್ಸ್ ಬೆಲೆ 50 ರಿಂದ 70 ರೂ. ಏರಿಕೆ ಮಾಡಲಾಗಿದೆ. ಕಾಫಿ ಹಾಗೂ ಟೀ ಬೆಲೆ 3 ರೂಪಾಯಿ ಹೆಚ್ಚಳವಾಗಲಿದೆ, ತಿಂಡಿ ತಿನಿಸುಗಳ ಬೆಲೆ 5ರಿಂದ 10 ರೂಪಾಯಿಗಳಷ್ಟು ಏರಿಕೆಯಾಗಲಿದೆ. ರೈಸ್ ಬಾತ್ 40 ರಿಂದ 45 ರೂ ಗೆ ಹೆಚ್ಚಳ, ಇಡ್ಲಿ (2 ಕ್ಕೆ) 40-50. ಸೆಟ್ ದೋಸೆ 60-65, ಬೆಣ್ಣೆ ಮಸಾಲೆ ದೋಸೆ 70-80 ರೂಗೆ ಏರಿಕೆಯಾಗಲಿದೆ.


[ays_poll id=3]