This is the title of the web page
This is the title of the web page
National NewsPolitics News

ಕೇಂದ್ರ ಬಜೆಟ್‌ ಮೇಲೆ ಭಾರಿ ನಿರೀಕ್ಷೆ : ಮಹತ್ವದ ಘೋಷಣೆ ಸಾಧ್ಯತೆ..!


K2kannadanews.in

Union Budget 2024: 2023-24ನೇ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಸತತ 6ನೇ ಬಾರಿಗೆ(6th time) ಬಜೆಟ್​ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Normal seetaraman), ಈ ಮಧ್ಯಂತರ ಬಜೆಟ್​ನಲ್ಲಿ ಯಾರಿಗೆಲ್ಲಾ ಸಿಹಿ ಹಂಚಲಿದ್ದಾರೆ ಎಂಬ ನಿರೀಕ್ಷೆಗಳು (Expection) ಸದ್ಯ ಹೆಚ್ಚಿವೆ.

ದೆಹಲಿಯ (Deheli) ಹೊಸ ಸಂಸತ್‌ ಭವನದಲ್ಲಿ ಮಂಡನೆಯಾಗಲಿರುವ ಮೊದಲ ಬಜೆಟ್‌ (First budget in new parliament) ಇದಾಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯ ಕೊನೆ ಹಂತದಲ್ಲಿ ಈ ಮಧ್ಯಂತರ ಬಜೆಟ್ ಮಂಡಿಸಲಾಗುತ್ತಿದೆ. ಈ ಬಾರಿ ಮತದಾರರಿಗೆ ಸಿಹಿ ನೀಡುವುದರ ಜತೆಗೆ ಆರ್ಥಿಕತೆಗೂ (use for economy) ಅನುಕೂಲವಾಗುವ ದೃಷ್ಟಿಯಿಂದ ಮಹತ್ವದ (important) ಘೋಷಣೆಗಳನ್ನು ಪ್ರಕಟಿಸುವ ಸಾಧ್ಯತೆಗಳು ಅಧಿಕವಾಗಿದೆ.


ಬಜೆಟ್​ ಮಂಡನೆ ಬಳಿಕ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಬಜೆಟ್ ಮಂಡನೆಯಾಗುವ ಸಾಧ್ಯತೆಗಳೂ ಸಹ ಹೆಚ್ಚಿದ್ದು, ಈಗಾಗಲೇ ಲೋಕಸಭೆ ಚುನಾವಣೆಗೆ (Parliament election) ದಿನಗಣನೆ ಆರಂಭಗೊಂಡಿದೆ. ಈ ಬಾರಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಮಹಾ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ಪತಾಕೆ ಹಿಡಿಯುವ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿಯಿದೆ.


[ays_poll id=3]