
K2 ನ್ಯೂಸ್ ಡೆಸ್ಕ್ : ಮಹಾಶಿವರಾತ್ರಿಯು ವಿಶೇಷ ದಿನವಾಗಿದ್ದು, ಈ ದಿನ ಭಗವಾನ್ ಶಿವನನ್ನು ವಿಧಿ – ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಮಹಾಶಿವರಾತ್ರಿಯ ಈ ಶುಭ ದಿನದಂದು ಶಿವನನ್ನು ಆರಾಧಿಸುವುದಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಮಹಾ ಶಿವರಾತ್ರಿಯಂದು ಶಿವನನ್ನು ಪೂಜಿಸುವುದರಿಂದ ನಮ್ಮೆಲ್ಲಾ ಆಸೆಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ ನಮ್ಮೆಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಲು ದೇವಾಧಿದೇವನಾದ ಮಹಾಶಿವನನ್ನು ಹೇಗೆ ಪೂಜಿಸಬೇಕೆಂಬುದನ್ನು ತಿಳಿದುಕೊಳ್ಳಿ.
ಮಹಾಶಿವರಾತ್ರಿ ಪೂಜೆ ಮಾಡುವುದು ಹೇಗೆ? ಶಾಸ್ತ್ರಜ್ಞರ ಪ್ರಕಾರ, ಮಹಾಶಿವರಾತ್ರಿ ಪೂಜೆ ಮಾಡಲು ಹಲವು ಕ್ರಮಗಳನ್ನು ಅನುಸರಿಸಬೇಕು. ಬೆಳಗ್ಗೆ ವ್ರತದ ಸಂಕಲ್ಪ ಮಾಡಿ, ಸಾಯಂಕಾಲ ಸ್ನಾನದ ನಂತರ ಭಸ್ಮ, ರುದ್ರಾಕ್ಷಿಗಳನ್ನು ಧರಿಸಿ ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ, 108 ಬಿಲ್ವಪತ್ರೆಗಳನ್ನು ಪಂಚಾಕ್ಷರಿ ಸಹಿತ ಅರ್ಪಿಸಬೇಕು. ಪುಷ್ಪಗಳನ್ನು ಅರ್ಪಿಸಿ ಅರ್ಥ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ, ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು & ಕ್ಷಮಾಯಾಚನೆ ಮಾಡಬೇಕು ಎನ್ನುತ್ತಾರೆ.
![]() |
![]() |
![]() |
![]() |
![]() |
[ays_poll id=3]