This is the title of the web page
This is the title of the web page
State News

ಪೆನ್ನು ಹಿಡಿಯೋ ಕೈಯಲ್ಲಿ ಸಿಗರೇಟ್‌ : ಪಾಲಕರೆ ಮಕ್ಕಳ ಬಗ್ಗೆ ಇರಲಿ ಎಚ್ಚರ…!


K2 ನ್ಯೂಸ್ ಡೆಸ್ಕ್ : ರಾಜ್ಯದಲ್ಲಿ ಈಗ ಯುವ ಸಮೂಹ ಮತ್ತು ಅಪ್ರಾಪ್ತ ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಗುರಿಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮುಖ್ಯವಾಗಿ ಇಲ್ಲಿ ಪಾಲಕರು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ.ಪೊಲೀಸ್

ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳು ಒಂದು ಕಡೆ ಶಾಲಾ-ಕಾಲೇಜುಗಳಿಗೆ ತೆರಳಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಕೆಲ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಬುಕ್‌, ಪೆನ್‌ ಹಿಡಿಯಬೇಕಾದ ಕೈಗಳು ಸಿಗರೇಟು ತುಂಡಾನ್ನು ಹಿಡಿದು ಹೊಗೆ ಬಿಡುವಂತಾಗಿದೆ.

ಇತ್ತೀಚಿಗೆ Xನಲ್ಲಿ ವಿ.ವಿ ಪುರದ ಟೆಂಪಲ್ ಸ್ಟ್ರೀಟ್ ಬಳಿ ವಿದ್ಯಾರ್ಥಿಗಳು ಸ್ಕೂಲ್‌ ಯೂನಿಫಾರ್ಮ್‌ನಲ್ಲೇ ಬಂದು ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ. ಅವ್ಯಾಹತವಾಗಿ ಸಿಗರೇಟ್ ಸೇದುತ್ತಾ ಚಟಕ್ಕೆ ಬಿದ್ದಿರುವ ವಿದ್ಯಾರ್ಥಿಗಳ ಫೋಟೊವನ್ನು ಸಾರ್ವಜನಿಕರು ತೆಗೆದು ಪೋಸ್ಟ್‌ ಮಾಡಿದ್ದಾರೆ.


[ays_poll id=3]