This is the title of the web page
This is the title of the web page
Crime NewsLocal NewsVideo News

ಬಿಸಿಲಿನ ತಾಪಕ್ಕೆ ವಾಂತಿ ಬೇದಿ ಕಾಣಿಸಿಕೊಂಡು ಬಾಣಂತಿ ಸಾವು : ಹೆಣ್ಣುಮಗು ಅನಾಥ..

Oplus_0

K2kannadanews.in

Baranti’s death ಸಿಂಧನೂರು : ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ತಾಪ (sun stock) ದಿನೆ ದಿನೆ ಹೆಚ್ಚಾಗುತ್ತಿದ್ದು ಜನ (People) ಪರದಾಡುವಂತಾಗಿದೆ. ಬಿಸಿಲಿನ ತಾಪ ಹೆಚ್ಚಾದ ಕಾರಣ ವಾಂತಿ-ಭೇದಿ (Baranti’s death) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಣಂತಿ ಮೃತಪಟ್ಟಿದ್ದು (Death), ತಾಯಿ ಇಲ್ಲದೆ 4 ತಿಂಗಳ ಹೆಣ್ಣುಮಗು ಆಸ್ಪತ್ರೆಯಲ್ಲಿ ಅನಾಥವಾದ ಘಟನೆ ನಡೆದಿದೆ.

ಬಾಣಂತಿ ಲಕ್ಷ್ಮಿ ದುರಗಪ್ಪ ನಾಯಕ ಯದ್ದಲದೊಡ್ಡಿ (30) ಅವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ (governament hosptal) ದಾಖಲು ಮಾಡಿದ್ದು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ನಗರದ ಜನತಾ ಕಾಲೊನಿಯಲ್ಲಿ (Janatha colony) ಮನೆ ಮಾಡಿ ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಲಕ್ಷ್ಮಿಗೆ ವಾಂತಿ-ಭೇದಿಯಾದಾಗ ಪತಿ (Husband) ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಎರಡು ದಿನಗಳಿಂದ ವೈದ್ಯರು (Doctor) ಚಿಕಿತ್ಸೆ ನೀಡಿದ್ದಾರೆ.

 

ಗುಣಮುಖರಾಗದೆ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ (Treatment) ರಾಯಚೂರಿಗೆ ಹೋಗುವಂತೆ ಹೇಳಿದ್ದರೂ ಸಹ ಕುಟುಂಬಸ್ಥರು (Family members) ನಿರಾಕರಿಸಿದ್ದು, ಬೆಳಗಿನ ಜಾವ (Early morning) ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಮಹಿಳೆಗೆ ಚಿಕಿತ್ಸೆ ನೀಡಿದ ಡಾ.ಮಂಜುನಾಥ ಅವರು ಮಾಹಿತಿ ನೀಡಿದರು. 4 ತಿಂಗಳ ಹೆಣ್ಣು ಮಗು ಅನಾಥವಾಗಿದ್ದು ಸಂಬಂಧಿಕರು ಆಸ್ಪತ್ರೆಯ ಶವಗಾರದ ಮುಂದೆ ಎತ್ತಿಕೊಂಡರು ಸಹ ಮಗು ಅಳುವ ದೃಶ್ಯ ನೋಡುಗರ ಮನ ಕಲಕುವಂತ್ತಿತ್ತು.


[ays_poll id=3]