
ದೇವದುರ್ಗ : ದೇಶಪ್ರೇಮ, ಕರ್ತವ್ಯನಿಷ್ಠೆ, ಬದ್ಧತೆ,ನೈಪುಣ್ಯತೆಯಂತಹ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಜಿ. ಕುರಿತು ಎಚ್.ಡಿ.ಕುಮಾರಸ್ವಾಮಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಡೆ-ನುಡಿ,ಬದ್ಧತೆ,ಕುಟುಂಬ ಪ್ರೇಮದ ರಾಜಕಾರಣದ ಕುರಿತು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ನಾಟಕೀಯವಾಗಿ ಸಮಯ-ಸಂದರ್ಭಗಳಲ್ಲಿ ಕಣ್ಣೀರು ಹಾಕುವುದು ಕೂಡ ಕುಮಾರಸ್ವಾಮಿ ಅವರಿಗೆ ಹೊಸದೇನಲ್ಲ. ಜೆಡಿಎಸ್ ಪಕ್ಷದಲ್ಲಿ ಇತರೆ ನಾಯಕರನ್ನು ನಡೆಸಿಕೊಳ್ಳುವ ರೀತಿ ಮತ್ತು ಪ್ರಾದೇಶಿಕ ಪಕ್ಷದಿಂದ ತಮ್ಮ ಹಿಡಿತ ಹೊಂದಿದ್ದರಿಂದ ಅನೇಕರು ಪಕ್ಷ ತೊರೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಇಂಥ ಮಾಜಿ ಮುಖ್ಯಮಂತ್ರಿ ನಮ್ಮ ರಾಷ್ಟ್ರೀಯ ನಾಯಕರ ಕುರಿತು ಹಗುರುವಾಗಿ ಮಾತನಾಡುವದು ಸಮಂಜಸವಲ್ಲ. ತಮ್ಮ ವ್ಯಕ್ತಿತ್ವ, ರಾಜಕೀಯ ನಡೆ, ಸಮಯ ಬಂದಾಗ ಮೊಸಳೆ ಕಣ್ಣೀರು ಹಾಕುವದು, ಹೊಂದಾಣಿಕೆಯ ನಿಷ್ಠೆ, ಬದ್ಧತೆ ಇಲ್ಲದಿರುವದು ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ ಎಂದು ಶಾಸಕ ಶಿವನಗೌಡ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
![]() |
![]() |
![]() |
![]() |
![]() |
[ays_poll id=3]