This is the title of the web page
This is the title of the web page
State

ಜಾನಪದ ವಸ್ತು ಸಂಗ್ರಹಾಲಯ ಉಳಿಸಲು ಸರ್ಕಾರದ ನೆರವು: ಸಿಎಂ


K2 ನ್ಯೂಸ್ ಡೆಸ್ಕ್ : ಮೈಸೂರು ವಿಶ್ವ ವಿದ್ಯಾಲಯದಲ್ಲಿ ಪಿ. ಆರ್. ತಿಪ್ಪೇಸ್ವಾಮಿ ನಿರ್ಮಿಸಿದ ಜಾನಪದ ವಸ್ತು ಸಂಗ್ರಹಾಲಯವನ್ನು ಉಳಿಸಿಕೊಂಡು ಹೋಗಲು ಸರ್ಕಾರ ಸಹಕಾರ ನೀಡಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಿಪ್ಪೆಸ್ವಾಮಿಯವರು ಜಾನಪದವನ್ನು ಚಿತ್ರಕಲೆಗೆ ಜೋಡಿಸಿ ವಸ್ತುಸಂಗ್ರಹಾಲಯ ಕಟ್ಟಿದರು. ಬೆಂಗಳೂರಿನ ರಸ್ತೆಗೆ ತಿಪ್ಪೆಸ್ವಾಮಿ ಅವರ ಹೆಸರಿಡುವ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸುವುದಾಗಿ ಮುಖ್ಯ ಮಂತ್ರಿಗಳು ಭರವಸೆ ನೀಡಿದರು.

ಪ್ರೇರಣೆ : ‌ಮುಂದಿನ ಜನಾಂಗಕ್ಕೆ ಪ್ರೇರಣೆ ಕೊಡುವ ಶಕ್ತಿ ತಿಪ್ಪೆಸ್ವಾಮಿ ಅವರಿಗೆ ಇದೆ. ಅದನ್ನು ಉಳಿಸಿಕೊಂಡು ಹೋಗಬೇಕು. ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸ, ಚಿತ್ರಕಲೆ ಪ್ರದರ್ಶನ ಮಾಡುವ ಕೆಲಸವನ್ನು ಮಾಡಿದರೆ ಸರ್ಕಾರ ಸಹಕಾರ ನೀಡಲಿದೆ ಎಂದರು..

ಬದುಕಿನ ಮಹತ್ವ : ನಾವು ಇಂದು ಪಿ ಆರ್ ತಿಪ್ಪೆಸ್ವಾಮಿ ಅವರ ಜನ್ಮ ಶತಮಾನೊತ್ಸವ ಆಚರಣೆ ಮಾಡಿತ್ತಿದ್ದೇವೆ ಅಂದರೆ ಅವರ ಬದುಕು ಎಷ್ಟು ಮಹತ್ವದ್ದಾಗಿತ್ತು ಅಂತ ನಾವು ಅರ್ಥ ಮಾಡಿಕೊಳ್ಳಬೇಕು. ಪ್ರತಿ ವ್ಯಕ್ತಿಯಲ್ಲಿ ಅಭೂತಪೂರ್ವ ಸ್ವಭಾವ ಇರುತ್ತದೆ ಅದನ್ನು ಅರ್ಥ ಮಾಡಿಕೊಂಡರೆ ನಮಗೆ ಅರ್ಥವಾಗುತ್ತದೆ. ಬದುಕಿನಲ್ಲಿ ಹಲವಾರು ತಿರುವುಗಳಿರುತ್ತವೆ.‌ ಯಾರು ತಮ್ಮ ಬದುಕಿನ ದಾರಿ ನಿರ್ಣಯ ಮಾಡುತ್ತಾರೊ ಅವರು ಮಾತ್ರ ಹೆಜ್ಜೆಗುರುತು ಬಿಟ್ಟು ಹೋಗುತ್ತಾರೆ. ಅವರು ಆಗ ಅಷ್ಟು ವ್ಯವಸ್ಥಿತ ಜೀವನ ನಡೆಸಿದರು‌.

ಈಗಿನ ಚಿತ್ರಕಲಾಕಾರರ ಜೀವನ ಬಹಳ ಕಷ್ಟ ಇದೆ‌. ಅವರು ಬಿಡಿಸಿರುವ ಚಿತ್ರಗಳು ಬಹಳ ಅದ್ಭುತವಾಗಿವೆ. ಅವು ಬಹುತೇಕ ಮಲೆನಾಡಿನ ಪ್ರಭಾವ ಹೊಂದಿವೆ. ಅವರು ಕೇವಲ ಚಿತ್ರಕಲೆ ಮಾಡದೇ ವಸ್ತು ಸಂಗ್ರಹಾಲಯ ಮಾಡುವ ಪ್ರಯತ್ನ ಮಾಡಿದರು.
ನಮ್ಮದು ಅತ್ಯಂತ ಸನ್ನಡತೆಯುಳ್ಳ ಸಂಸ್ಕೃತಿ ನಮ್ಮದು. ಈ ನಾಡನ್ನು ಶ್ರೀಮಂತ ಗೊಳಿಸಿದ ತಿಪ್ಪೆಸ್ವಾಮಿ ಅವರ ಹೆಸರು ಅಜರಾಮರವಾಗಿ ಅವರ ಶತಮಾನೋತ್ಸವ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.


60
Voting Poll