This is the title of the web page
This is the title of the web page
Crime NewsLocal NewsVideo News

ಅಂಬೇಡ್ಕರ್ ವೃತ್ತದಲ್ಲಿ ಸರಕಾರಿ ಬಸ್ ಬ್ರೇಕ್ ಫೇಲ್ : ಬೈಕ್ ಸವಾರರು ಸ್ವಲ್ಪದರಲ್ಲೇ ಪಾರು..


K2kannadanews.in

NEKRTC bus brack faile ರಾಯಚೂರು : ನಗರದ ಅಂಬೇಡ್ಕರ್ (ambedkar) ವೃತ್ತದ ಬಳಿ ಈಶಾನ್ಯ ಸಾರಿಗೆ ಸಂಸ್ಥೆಗೆ (NEKRTC) ಸೇರಿರುವ, ರಾಯಚೂರು ಎರಡನೇ ಘಟಕದ (Depo 2) ಬಸ್ ಬ್ರೇಕ್ ಫೇಲ್ (Brack fail) ಆಗಿ, ದ್ವಿಚಕ್ರ ವಾಹನಗಳಿಗೆ (Accident 2 bike) ಡಿಕ್ಕಿ ಹೊಡೆದ ಘಟನೆ ಜರುಗಿದ್ದು, ಸ್ವಲ್ಪದರಲ್ಲೆ (Just miss) ದ್ವಿಚಕ್ರ ವಾಹನ ಸವಾರರು ಪಾರಾಗಿದ್ದಾರೆ.

ರಾಯಚೂರು (Raichur) ನಗರದ ಕೇಂದ್ರ ಬಸ್ (bus stop) ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆ ಬಸ್ ನ ಬ್ರೇಕ್ ಫೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ರಾಯಚೂರಿನಿಂದ ತಲಮಾರಿ (Raichur to talmari) ಗ್ರಾಮಕ್ಕೆ ಹೋಗುತ್ತಿದ್ದ ಬಸ್ ಇದಾಗಿದ್ದು. ಚಾಲಕನಿಗೆ ನಿಯಂತ್ರಣಕ್ಕೆ (Out of control) ಸಿಗದೇ ಮುಂದೆ ಹೋಗುತ್ತಿದ್ದ ಎರಡು ಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬೈಕ್ ನಲ್ಲಿ ಇದ್ದಂತಹ ಸವಾರರು ಹಾರಿದ್ದರಿಂದ ಯಾವುದೇ ಪ್ರಾಣಪಯ ಆಗಿಲ್ಲ. ಘಟನೆ ನೋಡಿ ಹಲವು ವಾಹನ ಸವಾರರು, ಸಾರ್ವಜನಿಕರು ನಿರ್ವಹಣೆ ಇಲ್ಲದೆ ಬಸ್ಸುಗಳನ್ನು ರಸ್ತೆಗೆ ಇಳಿಸುತ್ತಿದ್ದಾರೆ, ಹಾಗಾಗಿ ಬ್ರೇಕ್ ಪಾಲಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದರು.

ಆದರೆ ಘಟನೆಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದು. ಬಸ್ಸಿನ ಬ್ರೇಕ್ ಫೇಲ್ ಆಗಿಲ್ಲ, ಚಾಲಕನ ನಿಯಂತ್ರಣ ತಪ್ಪಿರಬಹುದು‌ ಅಥವಾ ಸಮಸ್ಯೆ ಆಗಿರಬಹುದು ಇಲಾಖೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದರು.


[ays_poll id=3]