This is the title of the web page
This is the title of the web page
Crime NewsLocal News

ಅಪ್ರಾಪ್ತ ವಯಸ್ಸಿನಲ್ಲೇ ಲವ್ : ಮನೆಯವರ ವಿರೋಧ ಬಾಲಕಿ ಆತ್ಮಹತ್ಯೆ..!


K2kannadanews.in

Love suicide ರಾಯಚೂರು : ಅಪ್ರಾಪ್ತ ವಯಸ್ಸಿನಲ್ಲೇ (Minor Aged Girl) ಕಾರು ಚಾಲಕನ ಜತೆ ಪ್ರೀತಿ-ಪ್ರೇಮ-ಪ್ರಣಯದಲ್ಲಿ (Love With Car Driver) ತೊಡಗಿದ್ದ ಬಾಲಕಿಯೊಬ್ಬಳು (girl) ಇದೀಗ ಪ್ರಾಣ ಕಳೆದುಕೊಂಡಿದ್ದಾಳೆ (Self Harming). ಇದಕ್ಕೆ ಕಾರಣ ಅವಳ ಹೆತ್ತವರು ಈ ಪ್ರೀತಿಯನ್ನು ಆಕ್ಷೇಪಿಸಿದ್ದು.

ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ಪಟ್ಟಣದಲ್ಲಿ ಘಟನೆ ನಡೆದಿದೆ. ಸಂಗೀತಾ(17) ಆತ್ಮಹತ್ಯೆಗೆ (Suicide) ಮಾಡಿಕೊಂಡ ಅಪ್ರಾಪ್ತ ಬಾಲಕಿ. ಕಾರು ಡ್ರೈವರ್ (Driver) ಕೃಷ್ಣ ಎಂಬಾತನ ಪ್ರೇಮ ಪಾಶದಲ್ಲಿ ಬಿದ್ದಿದ್ದ ಬಾಲಕಿ. ಈ ಹಿಂದೆ 2 ಬಾರಿ ಕೃಷ್ಣನ (Krishna) ಜೊತೆಗೆ ಮನೆಬಿಟ್ಟು ಹೋಗಿದ್ದ ಬಾಲಕಿ. ಮನೆಯವರು ಬುದ್ಧಿವಾದ ಹೇಳಿ ಕರೆತಂದಿದ್ದರು. ಆದರೆ ಕೃಷ್ಣನ ಜೊತೆಗೆ ಹೋಗುವುದಾಗಿ ಹಠ ಮಾಡಿದ್ದ ಬಾಲಕಿ.

ಆದರೆ ಮನೆಯವರು ಇದಕ್ಕೆ ವಿರೋಧಿಸಿದ್ದಾರೆ (opposed). ಇದರಿಂದ ಮನನೊಂದ ಯುವತಿ ಮನೆಯಲ್ಲಿದ್ದ ಸೀರೆಯಿಂದ (Sari) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಬಾಲಕಿ ಸಂಗೀತಾ ಮೃತದೇಹ ಮಾನ್ವಿ ಸರ್ಕಾರಿ ಆಸ್ಪತ್ರೆಗೆ (Government hospital) ರವಾನಿಸಲಾಗಿದೆ. ಮಾನ್ವಿ ಪೊಲೀಸ್ ಠಾಣಾ (Manvi police station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


[ays_poll id=3]