This is the title of the web page
This is the title of the web page
Local News

ತಾಲೂಕು ಜಿಲ್ಲಾ ಪಂಚಾಯತಿ ಚುನಾವಣೆಗೆ ಸಿದ್ಧರಾಗಿ


ಸಿರವಾರ : ಜಿ.ಪಂ, ತಾ.ಪಂ, ವಿಧಾನಸಭೆ ಇನ್ನಿತರ ಚುನಾವಣೆಗಳು ಯಾವಾಗ ಬೇಕಾದರೂ ಘೋಷಣೆಯಾಗಬಹುದು ನಾವು ಸಿದ್ದರಾಗಿರಬೇಕು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.

ತಾಲೂಕಿನ ಕಲ್ಲೂರು, ಹರವಿ, ಕೋಳಿ ಕ್ಯಾಂಪ್, ಸಿರವಾರ ಮತಕೇಂದ್ರಗಳಿಗೆ ಬುಧುವಾರ ಬೇಟಿ ನೀಡಿ ವಿಕ್ಷಣೆ ಮಾಡಿದರು. ನಂತರ ಮಾತನಾಡಿದ ಅವರು ವಿವಿಧ ಗ್ರಾಮಗಳ ಮತದಾನ ಕೇಂದ್ರಗಳಿಗೆ ಬೇಟಿ ನೀಡಲಾಗಿದೆ. ಕೋಣೆ, ಶೌಚಾಲಯ, ವಿದ್ಯುತ್, ಕುಡಿಯುವ ನೀರು, ವಿಕಲಚೇತನರಿಗೆ, ವೃದ್ಧರಿಗೆ ಅನುಕೂಲವಾಗಲು ವಿಲ್ಹ್ ಚೇರ್ ಸೇರಿ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ವಿಕ್ಷಣೆ ಮಾಡಲಾಗಿದೆ. ಹಾಳಾದಲ್ಲಿ, ಪಂಚಾಯತಿಯವರಿಗೆ ತಿಳಿಸಿ ದುರಸ್ಥಿಗೊಳಿಸಲಾಗುವುದು. ಚುನಾವಣೆ ಯಾವಾಗ ಘೋಷಣೆಯಾದರೂ ನಾವು ಸಿದ್ದರಿರಬೇಕು ಎಂದರು.


[ays_poll id=3]