This is the title of the web page
This is the title of the web page
Crime News

ಬಾಲಕಿ ಮೇಲೆ ಗ್ಯಾಂಗ್‌ ರೇಪ್‌; ಕಲ್ಲಿಂದ ಚಚ್ಚಿ ಹತ್ಯೆಗೈದ ಪಾಪಿ ಕಾಮುಕರು


K2 ಕ್ರೈಂ ನ್ಯೂಸ್ : ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು , 8 ವರ್ಷದ ಬಾಲಕಿಯನ್ನು ಮೂವರು ಆರೋಪಿಗಳು ಅಪಹರಿಸಿ ಅತ್ಯಾಚಾರವೆಸಗಿ ಕಲ್ಲಿಂದ ಚಚ್ಚಿ ಕೊಲೆ ಮಾಡಿದ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.

ಬಾಲಕಿಯು ಕಾಣೆಯಾದ ಬೆನ್ನಲ್ಲೇ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ಇದೇ ವೇಳೆ ಘಟನೆಗೆ ಸಂಬಂಧಿಸಿ ನಗರದ ರೈಲ್ವೆ ನಿಲ್ದಾಣದ ಹಿಂಭಾಗದಲ್ಲಿ ಮಗುವಿನ ಶವ ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ್ದು, ಬಾಲಕಿಯು ವ್ಯಕ್ತಿಯೊಬ್ಬನ ಜೊತೆ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಸೆರೆಯಾಗಿದೆ. ಈ ವಿಡಿಯೋ ಆಧರಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳೆಲ್ಲರೂ ಬಾಲಕಿಯ ತಂದೆಯ ಪರಿಚಯಸ್ಥರೇ ಆಗಿದ್ದರು.

ಘಟನೆ ಕುರಿತು ಪೊಲೀಸ್‌ ಅಧಿಕಾರಿಯೊಬ್ಬರು ಮಾತನಾಡಿ, ಬಾಲಕಿಯನ್ನು ವ್ಯಕ್ತಿಯೊಬ್ಬ ಆಮಿಷವೊಡ್ಡಿ ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿದ್ದ. ಅದಾದ ಬಳಿಕ ಆಕೆಯನ್ನು ಮೂವರು ಆರೋಪಿಗಳು ಪೊದೆಯೊಳಗೆ ಕರೆದೊಯ್ದು ಅತ್ಯಾಚಾರವೆಸಗಿ, ಅಲ್ಲೇ ಇದ್ದ ದೊಡ್ಡ ಕಲ್ಲನ್ನು ಬಳಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.


[ays_poll id=3]