This is the title of the web page
This is the title of the web page
Crime NewsVideo News

ಶಾರ್ಟ್ ಸರ್ಕ್ಯೂಟ್ ನಿಂದ ಕಂಪ್ಯೂಟರ್ ಬೈಂಡಿಂಗ್ ಅಂಗಡಿಗೆ ಬೆಂಕಿ ಆಗಿದ್ದಾದ್ರು ಏನು..?


K2kannadanews.in

short circuit ಮಾನ್ವಿ : ಬೆಳ್ಳಂ ಬೆಳಗ್ಗೆ (early morning) ಶಾರ್ಟ್ ಸರ್ಕ್ಯೂಟ್ (short circuit) ನಿಂದ ಕಂಪ್ಯೂಟರ್ ಬೈಂಡಿಂಗ್ (Computer binding shop) ಅಂಗಡಿಗೆ ಬೆಂಕಿ. ಹೊತ್ತಿಕೊಂಡು ಸಂಪೂರ್ಣವಾಗಿ ಭಸ್ಮವಾದ ಘಟನೆ ಮಾನ್ವಿ (Manvi) ಪಟ್ಟಣದಲ್ಲಿ ಜರುಗಿದೆ.

ರಾಯಚೂರು (Raichur) ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ರಾತ್ರಿ ಗಾಳಿ ಬೀಸಿದ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಅಂಗಡಿ ಶಟರ್ ಹಾಕಿದ ಕಾರಣ ಬೆಂಕಿ ಹೊತ್ತಿಕೊಂಡಿದ್ದು ಬೇಗ ತಿಳಿದು ಬಂದಿಲ್ಲ.

ಬೆಳಗ್ಗೆ 6 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಷ್ಟರಲ್ಲಾಗಲೆ ಅಂಗಡಿಯಲ್ಲಿದ್ದ ಸಾಮಾಗ್ರಿಗಳು ಸಂಪೂರ್ಣ ಭಸ್ಮವಾಗಿವೆ. ವೀಡಿಯೋ ಟೇಪ್, ಬೈಂಡಿಂಗ್ ಸಾಮಾಗ್ರಿ, ಕಂಪ್ಯೂಟರ್ ಸುಟ್ಟು ಭಸ್ಮ. 15 ಲಕ್ಷದಷ್ಟು ಸಾಮಾಗ್ರಿಗಳು ಸುಟ್ಟು ಭಸ್ಮವಾಗಿದೆ ಎಂದ ಮಾಲಿಕ ಶ್ರೀನಿವಾಸ. ಇನ್ನೂ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಯಾವುದೇ ಆಹಿತಕರ ಘಟನೆ ನಡೆದಿಲ್ಲ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


[ays_poll id=3]