This is the title of the web page
This is the title of the web page
Education News

ಕಲಬುರ್ಗಿ ವಿಭಾಗದಲ್ಲಿ ಶೂನ್ಯಫಲಿತಾಂಶ ಶಾಲೆಗಳು 44 : ಕಲಬುರ್ಗಿ 18, ರಾಯಚೂರು 5..!

Oplus_0

K2kannadanews.in

Education News ರಾಯಚೂರು : ನಿನ್ನೆಯಷ್ಟೇ ರಾಜ್ಯದಲ್ಲಿ (State) SSLC ಫಲಿತಾಂಶ (Result) ಬಿಡುಗಡೆಯಾಗಿದ್ದು ಈ ಬಾರಿ ರಾಜ್ಯದಾದ್ಯಂತ ಒಟ್ಟು 78 ಶಾಲೆಗಳು (School)  ಸೊನ್ನೆ ಫಲಿತಾಂಶ ಗಳಿಸಿದ ಶಾಲೆಗಳಲಿವೆ ಅದರಲ್ಲಿ ಕಲಬುರಗಿ ವಿಭಾಗದ್ದೇ (Kalburgi division) 44 ಶಾಲೆಗಳಿವೆ ಎನ್ನುವುದು ಗಮನಾರ್ಹ. ಇನ್ನೂ ಶೂನ್ಯ ಫಲಿತಾಂಶಕ್ಕೆ ಕಾರಣವೇನು ಎಂಬುದು ಕೂಡ ಬಯಲಾಗಿದೆ.

ಹೌದು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (exam) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದ ಏಳು ಜಿಲ್ಲೆಗಳ (District) 44 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಇದರಲ್ಲಿ ಮೊದಲ ಸ್ಥಾನದಲ್ಲಿ (First place) ಕಲಬುರಗಿ ಜಿಲ್ಲೆಯಲ್ಲಿ 18 ಶಾಲೆಗಳು ಶೂನ್ಯ ಫಲಿತಾಂಶ ಗಳಿಸಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನೂ ಬೀದರ್‌ (bidar) 9, ಯಾದಗಿರಿ (Yadgiri) 7, ರಾಯಚೂರಿ (Raichur) 5, ಕೊಪ್ಪಳ (Koppal) ಮತ್ತು ವಿಜಯನಗರದಲ್ಲಿ (Vijayanagar) ತಲಾ ಎರಡು ಹಾಗೂ ಬಳ್ಳಾರಿ ballary) ಒಂದು ಶಾಲೆ ಶೂನ್ಯ ಫಲಿತಾಂಶ (Zero Result) ಪಡೆದಿವೆ. ಜಿಲ್ಲಾವಾರು ಶ್ರೇಣಿಯಲ್ಲಿ ಕೊನೆಯ ಆರು ಸ್ಥಾನಗಳೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಪಾಲಾಗಿವೆ.

ಕಲಬುರಗಿ ಭಾಗದಲ್ಲಿ ಕನಿಷ್ಠ 10 ವರ್ಷ (Years) ನಿರಂತರವಾಗಿ ಸೇವೆ ಸಲ್ಲಿಸಿದ 2,504 ಅನುಭವಿ ಶಿಕ್ಷಕರು (Teachers) ಬೇರೆ ಬೇರೆ ವಿಭಾಗಗಳಿಗೆ ವರ್ಗಾವಣೆಯಾಗಿ (Transfer) ಹೋಗಿದ್ದು ಪ್ರಮುಖ ಕಾರಣ. ಆದರೆ ಅನ್ಯ ವಿಭಾಗಗಳಿಂದ ಕಲಬುರಗಿ ವಿಭಾಗಕ್ಕೆ ಮೂರಂಕಿಯಷ್ಟು ಶಿಕ್ಷಕರು ಮಾತ್ರ ಬಂದರು. ಹೀಗಾಗಿ, ಮಕ್ಕಳಿಗೆ ನುರಿತ ಶಿಕ್ಷಕರಿಂದ ಪಾಠ ಸಿಗಲಿಲ್ಲ. ಇವುಗಳ ಜೊತೆಗೆ ಮೂಲಸೌಕರ್ಯಗಳ ಕೊರತೆಯೂ ಫಲಿತಾಂಶದ ಹಿನ್ನೆಡೆಗೆ ಕಾರಣ ಎನ್ನುತ್ತಾರೆ ಶಿಕ್ಷಕರ ವಲಯದಲ್ಲಿನ ಮಾತಾಗಿದೆ. ಪ್ರಮುಖವಾಗಿ ಈ ಭಾಗದಲ್ಲಿ ಸಾಮೂಹಿಕ ನಕಲು ತಡೆ ಹಾಗೂ ಪಾರದರ್ಶಕ ಪರೀಕ್ಷೆಗಾಗಿ ಇದೇ ಮೊದಲ ಬಾರಿಗೆ ಪರೀಕ್ಷಾ ಕೊಠಡಿಗಳಲ್ಲಿನ ವಿದ್ಯಮಾನಗಳ ಮೇಲೆ ಸಿಸಿಟಿವಿ ಕ್ಯಾಮೆರಾ (CC cameras) ಹಾಗೂ ಸಿಸಿಟಿವಿ ವೆಬ್‌ಕಾಸ್ಟಿಂಗ್‌ (Web casting) ಕಣ್ಗಾವಲು ಇರಿಸಲಾಗಿತ್ತು. ಇದು ಸಾಮೂಹಿಕ ನಕಲು ತಡೆಯುವಲ್ಲಿ ಯಶಸ್ವಿಯಾಯಿತು. ಇದು ಎಲ್ಲೋ ಒಂದುಕಡೆ ಫಲಿತಾಂಶ ತಗ್ಗಲು ಕಾರಣವಾಗಿದ್ದರು ಬಹುತೇಕ ಪಾಲಕರು ವೆಬ್ಕಾಸ್ಟಿಂಗ್ ಸ್ವಾಗತಿಸಿದ್ದಾರೆ.


[ays_poll id=3]