This is the title of the web page
This is the title of the web page
State News

ಅಪಘಾತದಲ್ಲಿ ಗಣೇಶ ಮೂರ್ತಿ ವಿಘ್ನ : ಅಪಘಾತಕ್ಕೆ ಇದೇ ಕಾರಣ.!


ಅಪಘಾತದಲ್ಲಿ ಗಣೇಶ ಮೂರ್ತಿ ವಿಘ್ನ : ತಪ್ಪಿದ ಅನಾಹುತ

ರಾಯಚುರು : ನಗರ ಜಿಲ್ಲೆಯಾದ್ಯಂತ ಗಣೇಶನ ಉತ್ಸವಕ್ಕಾಗಿ ಭರದಿಂದ ಸಿದ್ದತೆ ಸಾಗಿವೆ‌. ಅದರೆ ನಗರದಲ್ಲಿ ಪ್ರತಿಷ್ಠಾಪಿಸಲು ಹೈದ್ರಬಾದಿನಿಂದ ನಗರಕ್ಕೆ ತರಲಾಗುತ್ತಿದ್ದ ಗಣೇಶನ ಮೂರ್ತಿ ಆಂದ್ರದ ನಂದಿನಿ ಗ್ರಾಮದ ಬಳಿ ಬಿದ್ದು ಭಾರಿ ಅನಾಹುತ ತಪ್ಪಿದ ಘಟನೆ ಜರುಗಿದೆ.

ನಗರದಲ್ಲಿ ಸಾಕಷ್ಟು ಕಡೆ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠಿ ಗಾಗಿ ಬೃಹದಕಾರದ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅದೇ ಹಿನ್ನೆಲೆಯಲ್ಲಿ ಭಾರಿ ಗಾತ್ರದ ಗಣೇಶ ಮೂರ್ತಿಗಳನ್ನ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಂದ ತರಲಾಗುತ್ತಿದೆ. ಇದೇ ನಿಟ್ಟಿನಲ್ಲಿ  ಹೈದರಾಬಾದ್ ನಿಂದ ನಗರಕ್ಕೆ ಬೃಹತ್ ಗಣೇಶ ಮೂರ್ತಿಯನ್ನು ತರಲಾಗುತ್ತಿತ್ತು.

ಗಣೇಶನ ಹೊತ್ತ ಲಾರಿ ನಂದಿನಿ ಗ್ರಾಮದ ಬಳಿ ಬರುತ್ತಿದ್ದ ವೇಳೆ, ವಿದ್ಯುತ್ ವೈರ್ ಗೆ ತಗುಲಿ ಮೂರ್ತಿ ಉರುಳಿ ಬಿದ್ದಿದೆ. ಅದೃಷ್ಟವಷಾತ್ ಯಾರಿಗೂ ಗಾಯಗಳಾಗಿಲ್ಲ. ನಗರದ ಪ್ಲೇಟಾಬುರ್ಜ ಬಳಿ ಪ್ರತಿಷ್ಠಾಪಿಸಲು ಈ ಗಣೇಶ ಮೂರ್ತಿ ತರಲಾಗುತ್ತಿತ್ತು ಎಂದು ಹೇಳಲಾಗಿದೆ.


[ays_poll id=3]