This is the title of the web page
This is the title of the web page
Crime NewsPolitics NewsVideo News

ಇನ್ಶೂರೆನ್ಸ್ ಹೆಸರಲ್ಲಿ ಪಂಗನಾಮ ಹಾಕಿದ್ದು 4ಕೋಟಿ 50 ಲಕ್ಷ ಹುಷಾರ್..?


K2kannadanews.in

Fraud on insurance : ನೀವೇನಾದ್ರು ಲೈಫ್ ಇನ್ಸುರೆನ್ಸ್ ಪಾಲಿಸಿ (palisi) ಮಾಡಿಸೊ ಯೋಚನೆಯಲ್ಲಿ ಇದ್ರೆ ಸ್ಥಳಿಯ ಕಛೇರಿಗಳಿಗೆ (visit to office) ಭೇಟಿ ನೀಡಿ ಮಾಡಿಸಿ. ಆದ್ರೆ ಯಾರಾದ್ರು ಆನ್ಲೈನ್ ನಲ್ಲಿ (online) ಮಾಡುತ್ತೇವೆ ಎಂದರೆ ಆ ಬಗ್ಗೆ ಎಚ್ಚರ ಇರಲಿ. ಇತ್ತೀಛೆಗೆ ಹೀಗೆ ವಂಚಿಸುತ್ತಿದ್ದ ಆರೋಪಿಯನ್ನು (accused) ಬಂಧಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಮನ್ವೀರ್‌ಸಿಂಗ್‌ (manvir sing) ಅಲಿಯಾಸ್‌ ಮನೋಜ್‌ (manoj) ಬಂಧಿತ ಆರೋಪಿ. ಮನ್ವೀರ್‌ಸಿಂಗ್‌ ಎಂಬಾತ ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಸುರೆನ್ಸ್ (birla life insurance) ಹೆಸರಲ್ಲಿ ಕರೆ ಮಾಡುತ್ತಿದ್ದ. ಅದಾದ ಬಳಿಕ ಇನ್ಸುರೆನ್ಸ್ ಪ್ರೀಮಿಯಂ ಬಾಂಡ್ (premium bond) ಮಾಡಿಸುತ್ತೇನೆ ಎಂದು ನಂಬಿಸುತ್ತಿದ್ದ. ಜೊತೆಗೆ ಪಾಲಿಸಿ ಪಡೆಯಲು 15 ಲಕ್ಷ ಹಣವನ್ನು ಚೆಕ್ (Check) ಮುಖಾಂತರ ಪಡೆಯುತ್ತಿದ್ದ. ತಿಂಗಳ ನಂತರ ಇನ್ಸುರೆನ್ಸ್ ಕಂಪನಿಗೆ (Company) ಹೋಗಿ ವಿಚಾರಿಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬರುತ್ತಿತ್ತು. ಹೀಗೆ ನಾಲ್ಕು ಕೋಟಿ (Core) ಐವತ್ತೊಂದು ಲಕ್ಷ ಮೌಲ್ಯದ ಹಣ ವಂಚಿಸಿದ್ದ. ಘಟನೆಯ ಹಿನ್ನೆಲೆಯಲ್ಲಿ ಮೋಸ ಹೋದವರು ಬೆಂಗಳೂರು ಸೈಬರ್ ಕ್ರೈಂ (Cibber crime) ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಉತ್ತರಪ್ರದೇಶದ (uthar Pradesh) ಖಾಸ್ ಗಂಜ್‌ನಲ್ಲಿ ವಂಚನೆ ಮಾಡಿದ್ದ ಆರೋಪಿಯನ್ನು ಪತ್ತೆ ಮಾಡಿದ್ದಾರೆ.

ಟ್ರಾನ್ಸಿಟ್ ವಾರೆಂಟ್ ಮೂಲಕ ಬೆಂಗಳೂರಿಗೆ ಕರೆತಂದು 14 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿ, ಇದುವರೆಗೂ ಸುಮಾರು 4 ಕೋಟಿ 51 ಲಕ್ಷಕ್ಕೂ ಅಧಿಕ ಹಣ ಅಮಾಯಕರಿಗೆ ಮೋಸ ಮಾಡಿರೋದು ಬೆಳಕಿಗೆ ಬಂದಿದೆ. ಇದೇ ರೀತಿಯಾಗಿ ಆರೋಪಿ ಇನ್ಸುರೆನ್ಸ್ ಪಾಲಿಸಿ ಹೆಸರಲ್ಲಿ ಸುಮಾರು 34 ಕೇಸ್ ನಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಜನರಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪೊಟೋ ಚೆಕ್ ಪಡೆಯಲು ಸ್ಥಳೀಯ ವ್ಯಕ್ತಿಯನ್ನ ನೇಮಿಸಿಕೊಂಡಿದ್ದ. ಕೋರಿಯರ್ ಮೂಲಕ ಚೆಕ್‌ಗಳನ್ನು ಕಲೆಕ್ಟ್ ಮಾಡ್ಕೊಳ್ಳುತ್ತಿದ್ದ. ಚೆಕ್ ಕ್ಯಾಶ್ ಆದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದ ಎಂದು ಹೇಳಿದ್ದಾರೆ.


[ays_poll id=3]