This is the title of the web page
This is the title of the web page
Local News

ಹಿಂದುಳಿದ ಜನಾಂಗದ ಮೀಸಲಾತಿಗ ದಕ್ಕೆ ಬಾರದಂತೆ ಕ್ರಮ ವಹಿಸಲು ಒತ್ತಾಯ


ರಾಯಚೂರು : ಹಿಂದುಳಿದ ಜನಾಂಗದ ಮೀಸಲಾತಿಗೆ ದಕ್ಕೆ ಬಾರದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಪ್ರಬಲ ಮತ್ತು ಬಲಾಡ್ಯ ಸಮುದಾಯ ಪಂಚಮಸಾಲಿ ವೀರಶೈವರನ್ನು 2ಎ ಮೀಸಲಾತಿ ಅಡಿಯಲ್ಲಿ ತರಲು ಸರ್ಕಾರದ ಮೇಲೆ ಒತ್ತಡ ಬರುತ್ತಿರುವುದನ್ನು ಗಮನಿಸಿದರೆ ಸರ್ಕಾರವು ಒತ್ತಡಕ್ಕೆ ಮಣಿದು ಬಲಾಡ್ಯ ಸಮುದಾಯಕ್ಕೆ 2ಎ ಮೀಸಲಾತಿ ಅಡಿಯಲ್ಲಿ ತರಬಹುದು ಎಂಬ ಸಂಶವಿದೆ ಎಂದು ವ್ಯಕ್ತಪಡಿಸಿದರು. ಬಲಾಡ್ಯ ಸಮುದಾಯಕ್ಕೆ 2ಎ ಮೀಸಲಾತಿ ಅಡಿಯಲ್ಲಿ ಬಂದರೆ ಹಿಂದುಳಿದ ಮತ್ತು ಅತಿ ಹಿಂದುಳಿದ ಸಮಾಜದವರಿಗೆ ಅನ್ಯಾಯವಾ ಗುತ್ತದೆ, ಹಿಂದುಗಳಿದ ಸಮಾಜವನ್ನು ಮೇಲೆತ್ತಲು ಮೀಸಲಾತಿ ಉದ್ದೇಶವಾಗಿದೆ, ಪ್ರಬಲರಿಗೆ ಮೀಸಲಾತಿ ನೀಡಿದರೆ ಸಂವಿಧಾನಕ್ಕೆ ದಕ್ಕೆ ಮಾಡಿದಂತಾಗುತ್ತದೆ ಎಂದರು.

ಕೇಂದ್ರ ಸರ್ಕಾರ ಮುಂದುವರೆದ ಜಾತಿಗಳಿಗೆ ನೀಡಿದ ಶೇ 10 ರಷ್ಟು ಮೀಸಲಾತಿ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಹಿಂದುಳಿದ ಜಾತಿಗಳಿಗೆ ಮಾರಕವಾಗಲಿದೆ, ಸರ್ಕಾರದ ಇದಕ್ಕೆ ಮುಂದಾಗಬಾರದು, ತಮಿಳುನಾಡು ಸರ್ಕಾರದಿಂದ ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮರು ಪರಿಶೀಲಿಸಲು ಮೇಲ್ಮನವಿ ಸಲ್ಲಿಸಿದ ಮಾದರಿಯಲ್ಲಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಾಂತರಾಜ್ ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಿ ಕಾರ್ಯರೂಪಕ್ಕೆ ತರಬೇಕು, ಹಿಂದುಳಿದ ಜನಾಂಗದ ಬೇಡಿಕೆ ತಿರಸ್ಕರಿಸಿದರೆ ಹಿಂದುಳಿದ ಜಾತಿಗಳ ಹಕ್ಕುಗಳುನ್ನು ರಕ್ಷಿಸಿ ಕೊಳ್ಳಲು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು‌.


[ays_poll id=3]