
ರಾಯಚೂರು : ಮಾನ್ವಿ ತಾಲೂಕಿನ ಆರು ಖರೀದಿ ಕೇಂದ್ರಗಳಿಗೆ ತಡಕಲ್, ಬ್ಯಾಗವಾಟ್, ಹಿರೇಕೊಟ್ಟೆಕಲ್, ಮಾನ್ವಿ, ಪೋತ್ನಾಳ್ ಜೋಳ ಮಾರಾಟ ಮಾಡಿದ ರೈತರ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಿಂಗಾರಿನ ಅವಧಿಯಲ್ಲಿ ಹಲವು ಭಾಗಗಳಲ್ಲಿ ಜೋಳ ಬಿತ್ತನೆ ಮಾಡಿ ಹತ್ತಿರದಲ್ಲಿರುವ TAPCMS ಕೇಂದ್ರಗಳಿಗೆ ಮಾರಾಟ ಮಾಡಿದ್ದಾರೆ. ಆದರೆ ಮಾರಾಟ ಮಾಡಿ ಸುಮಾರು ಮೂರು ತಿಂಗಳಾದರೂ ಖರೀದಿ ಕೇಂದ್ರಗಳ ಪೈಕಿ 8 ನೂರಕ್ಕೂ ಹೆಚ್ಚು ರೈತರ ಖಾತೆಗೆ ಒಂದು ರೂಪಾಯಿ ಕೂಡಾ ಬಂದಿಲ್ಲ. ಹೊಲ ಬಿತ್ತನೆ ಸಮಯದಲ್ಲಿ ಮಾಡಿದ ಸಾಲ ಹಾಗೂ ಈಗ ಮುಂಗಾಲನ ಬಿತ್ತನೆಗೆ ಬೀಜ, ಇನ್ನಿತರ ಖರ್ಚಿಗೆ ರೈತರು ಮತ್ತೆ 3 ಬಡ್ಡಿ ಸಾಲ ತೆಗೆಯಬೇಕಾಗಿದೆ.
ಕೂಡಲೇ ಸಮಸ್ಯೆಯಲ್ಲಿರುವ ರೈತರುಗಳಿಗೆ ಜಿಲ್ಲಾಧಿಕಾರಿಗಳು/TAPCMS ಜಿಲ್ಲಾ ಮುಖ್ಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AKKMS) ಮೇಳ ಬೆಳೆಗಾರರ ರೈತರ ಪರವಾಗಿ ಮನವಿ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
![]() |
![]() |
![]() |
![]() |
![]() |
[ays_poll id=3]