This is the title of the web page
This is the title of the web page
Local News

ಕೊನೆ ಭಾಗಕ್ಕೆ ಭಾರದ ನೀರು ಪಕ್ಷತೀತವಾಗಿ ರಾಜ್ಯ ರಸ್ತೆ ತಡೆದು ಪ್ರತಿಭಟನೆ


ಸಿರವಾರ : ತುಂಗಭದ್ರಾ ಎಡದಂಡೆ ನಾಲೆಯ ಕೊನೆ ಭಾಗಕ್ಕೆ ಕಳೆದ 20 ದಿನಗಳಿಂದ ನೀರು ಬರದ ಹಿನ್ನೆಲೆಯಲ್ಲಿ ಕೊನೆ ಭಾಗಕ್ಕೆ ನೀರು ಹರಿಸಬೇಕೆಂದು ಪಕ್ಷಾತೀತವಾಗಿ ಕರೆ ನೀಡಿದ ರಾಯಚೂರು – ಲಿಂಗಸ್ಗೂರು ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ಅಸಮಾಧಾನ ಹೊರ ಹಾಕಿದರು.

ಪಟ್ಟಣದ ಮಾನ್ವಿ ಕ್ರಾಸ್‌ನಲ್ಲಿ ಇಂದು ಬೆಳಗ್ಗೆಯಿಂದಲೇ ಸಿರವಾರ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ರೈತರು, ಮುಖಂಡರು ಆಗಮಿಸಿ ಪಾಲ್ಗೊಂಡಿದರಿಂದ 10 ಗಂಟೆಯಿಂದಲೇ ರಸ್ತೆ ಬಂದ್ ಆಗಿತ್ತು. ಸ್ಥಳಕ್ಕೆ ನೀರಾವರಿ ಇಲಾಖೆ ಎಸ್.ಸಿ, ಇಇ ಆಗಮಿಸಿ ಎರಡು ದಿನಗಳಲ್ಲಿ ನೀರು ತಲುಪಿಸುವ ಭರವಸೆ ನೀಡಿದರು. ಆಗ ಮಧ್ಯ ಪ್ರವೇಶ ಮಾಡಿದ ಎನ್.ಎಸ್. ಬೋಸರಾಜ 5 ದಿನಗಳ ಹಿಂದೆ ಪ್ರತಿಭಟನೆ ಮಾಡಿದಾಗ ಇದೇ ರೀತಿ ಹೇಳಿದಿರಿ, ಎರಡು ದಿನಗಳ ಹಿಂದೇಯೆ ಪ್ರತಿಭಟನೆ ಮಾಡುತ್ತಾರೆಂಬ ವಿಷಯ ಗೊತ್ತಿದ್ದರು, ರೈತ ಮುಖಂಡರನ್ನು, ವಿವಿಧ ಪಕ್ಷದ ಮುಖಂಡರ ಸಭೆ ಕರೆದು ತಿಳಿಸಬೇಕಾಗಿತು.

ರೈತರು ರೊಚ್ಚಿಗೆದ್ದಿದಾರೆ, ನೀರು ಕೊಡುವುದಿಲ ಎಂದು ಹೇಳಿ ಬಿಡಿ ಹಿಂಗಾರು ಬಿತ್ತನೆ ಮಾಡುವುದಿಲ್ಲ, ಸ್ಪಷ್ಟ ಉತ್ತರ ಬೇಕು, ಜಿಲ್ಲಾಧಿಕಾರಿ, ಅಪಾರ ಜಿಲ್ಲಾಧಿಕಾರಿಗಳು ಸ್ಥಳಕ್ಜೆ ಬರುವರೆಗೂ ಧರಣಿ ಕೈ ಬಿಡುವುದಿಲ ಎಂದರು. ಮಾಜಿ ಶಾಸಕ ಜಿ.ಹಂಪಯ್ಯನಾಯಕ ಮಾತನಾಡಿ ನಮ್ಮ ನೀರು ಪಡೆಯಲು ಪ್ರತಿ ವರ್ಷ ಕಾಡಿ, ಬೇಡಿ ನೀರು ಪಡೆಯಬೇಕಾಗಿದೆ. ಜಲಾಶಯ ಭರ್ತಿಯಾಗಿದೆ, ನೀರು ಇದರು ನೀರು ನೀಡಲು ನಿಮಗೆ ಏನು ತೊಂದರೆ, ನೀರು ನೀಡಿ ಇಲ್ಲಾ ಎಕರೆಗೆ ಇಂತಿಷ್ಟು ಪರಿಹಾರ ಕೊಡಬೇಕು ಎಂದರು.


[ays_poll id=3]