This is the title of the web page
This is the title of the web page
State News

ಐದು ಹೊಸ ಸಂಚಾರಿ ಪೊಲೀಸ್ ಠಾಣೆ:ಸಿಎಂ ಬೊಮ್ಮಾಯಿ


K2 ನ್ಯೂಸ್ ಡೆಸ್ಕ್ : ಬೆಂಗಳೂರಿಗೆ 2-3 ದಿನಗಳಲ್ಲಿ ಐದು ಸಂಚಾರಿ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಸ್ತೆ ಅಭಿವೃದ್ಧಿಯ ಜೊತೆಗೆ ಸಂಚಾರ ನಿರ್ವಹಣೆ‌ : ಸಂಚಾರದಲ್ಲಿ ಇರುವ ಅಂತರವಿದ್ದ ಕಡೆಗಳಲ್ಲಿ (ಡಾರ್ಕ್ ಏರಿಯಾ) 5 ಸಂಚಾರ ಠಾಣೆಗಳು ಬರಲಿವೆ. ಇಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಯಾವುದೇ ವಾಹನ ಚಾಲಕರಿಗೆ ನಿಲ್ಲಿಸದೇ, ತೊಂದರೆ ಆಲ್ಲದೇ, ಭ್ರಷ್ಟಾಚಾರ ವಾದರೆ, ನಿಯಮ ಉಲ್ಲಂಘನೆ ಯಾದರೆ ಗುರುತಿಸುತ್ತದೆ. ಶುಲ್ಕವನ್ನು ಕೂಡ ಹಾಕುತ್ತದೆ. ಸಿಗ್ನಲ್ ಗಳ ಸಿಂಕ್ರೋನೈಜಿಂಗ್ ಕೂಡ ಮಾಡಲಾಗುತ್ತಿದೆ. ಮಿನರ್ವಾ ವೃತ್ತದಿಂದ ಟೌನ್ ಹಾಲ್ ವರೆಗೆ ಸಿಗ್ನಲ್ ಸಿಂಕ್ರೋನೈಜ್ ಮಾಡಲಾಗಿದೆ.

ಹಲವಾರು ಕಡೆ ಸಿಂಕ್ರೋನೈಜಿಂಗ್ ಪ್ರಾರಂಭವಾಗಿದೆ. ಇಂದು ಸಂಚಾರ ಸಭೆ ಕರೆದು 12 ಹೈ ಡೆನ್ಸಿಟಿ ಕಾರಿಡಾರ್ ಗಳಿಗೆ ಅಡೆತಡೆಯಿಲ್ಲದ ಸಂಚಾರ ಹಾಗೂ ಸಿಂಕ್ರೋನೈಜೇಶನ್ ಆಗಬೇಕೆಂದು ಸೂಚಿಸಲಾಗಿದೆ. 5-6 ಜಂಕ್ಷನ್ ಗಳನ್ನು ಸುಗಮಗೊಳಿಸಲು ಸೂಚಿಸಿದ್ದೇನೆ. ಗೋರಗುಂಟೆಪಾಳ್ಯ, ಸಿಲ್ಕ್ ಬೋರ್ಡ್ ಜಂಕ್ಷನ್, ಕೆ.ಆರ್. ಪುರಂ ಮುಂತಾದೆಡೆಗಳಲ್ಲಿ ಸಂಚಾರ ಸುಗಮವಾಗಲಿದೆ. ಬರುವ ದಿನಗಳಲ್ಲಿ ರಸ್ತೆ ಅಭಿವೃದ್ಧಿಯ ಜೊತೆಗೆ ಸಂಚಾರ ನಿರ್ವಹಣೆ ಕೂಡ ಉತ್ತಮ ರೀತಿಯಲ್ಲಿ ಆಗಬೇಕೆಂದು ಕೆಲಸ ಮಾಡುತ್ತಿದ್ದೇವೆ ಎಂದರು.

ಬಹಳ ದಿನಗಳಿಂದ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಸ್ಥಳ ನೆನೆಗುದಿಗೆ ಬಿದ್ದಿತ್ತು. ಸ್ಥಳಾಂತರಗೊಂಡ ಮೇಲೆ ಸರಿಯಾದ ವ್ಯವಸ್ಥೆ ಇಲ್ಲದಂತಾಗಿತ್ತು. ಸ್ಥಳದ ದಾಖಲೆಗಳು ದೊರಕಿದ ಮೇಲೆ ಬಹಳ ದಿನಗಳ ಆಸೆ ನೆರವೇರಿದೆ. ಸುವ್ಯವಸ್ಥಿತ ಪೊಲೀಸ್ ಠಾಣೆ, ಎಸಿಪಿ ಕಚೇರಿ ಮತ್ತು ಸಂಚಾರ ಕಟ್ಟಡ ನಿರ್ಮಾಣವಾಗಲಿದೆ. ಪೂರ್ವ ಭಾಗದಲ್ಲಿ ಒಳ್ಳೆಯ ಡಿಸಿಪಿ ಕಚೇರಿ ಆಗಿದೆ. ಇದರಿಂದ ಪೊಲೀಸ್ ಆಡಳಿತ ಸುಲಭ, ದಕ್ಷ ವಾಗಲಿದೆ. ಜನರಿಗೆ ಸೇವೆ ದೊರೆತು, ನ್ಯಾಯ ಸಿಗಬೇಕಾದವರಿಗೆ ನ್ಯಾಯ ದೊರಕಲಿದೆ.

ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ : ಹೊಸ ಸಂಚಾರ ವ್ಯವಸ್ಥೆ ಪ್ರಾರಂಭವಾಗಿದೆ. ಸಂಚಾರ ಸಮಸ್ಯೆ ಗಳನ್ನು ಬಗೆಹರಿಸಲು ವಿಶೇಷ ವಾಗಿರುವ ರಚನೆ ಹಾಗೂ ಯೋಜನೆ ಎರಡೂ ಅಗತ್ಯವಿತ್ತು. ಹಲವಾರು ಪ್ರಯೋಗಗಳಾದ ನಂತರ ಕೆಲವು ನಿರ್ಧಾರ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಸಂಚಾರಕ್ಕೆ ವಿಶೇಷ ಆಯುಕ್ತರ ಹುದ್ದೆ ಸೃಜಿಸಿ, ಅವರಿಗ್ಸ್ ಸಿಬ್ಬಂದಿ ನೀಡಲಾಗಿದೆ. ಸಂಚಾರ ವ್ಯವಸ್ಥೆಯಲ್ಲಿ ಪರಿಣಿತರಾಗಿರುವ, ಪಿ.ಹೆಚ್. ಡಿ.ಮಾಡಿರುವ ಎಸ್.ಎ. ಸಲೀಂ ಅವರನ್ನು ನೇಮಿಸಲಾಗಿದೆ. ಕೆಲವೇ ದಿನಗಳಲ್ಲಿ ಬಹಳ ದೊಡ್ಡ ಬದಲಾವಣೆ ತಂದಿದ್ದಾರೆ. ಮೇಲ್ಮಟ್ಟದಲ್ಲಿ ಮಾತ್ರವಲ್ಲದೆ ಕೆಳ ಮಟ್ಟದಿಂದ ಬಳಪಡಿಸಲಾಗುತ್ತಿದೆ ಎಂದರು.


[ays_poll id=3]