This is the title of the web page
This is the title of the web page
Crime NewsNational NewsVideo News

firecrackers with wheeling : ಪಟಾಕಿ ಸಿಡಿಸುತ್ತಾ ಬೈಕ್‌ ಸ್ಟಂಟ್ : ಇದೆಂಥಾ ಹುಚ್ಚು ಸಾಹಸ..


K2 ಕ್ರೈಂ ನ್ಯೂಸ್ : ದೀಪಾವಳಿ ಅಂದ್ರ ಮನೆಮುಂದೆ ಪಟಾಕಿ ಹಚ್ಚೋದು ನೋಡಿದ್ದೀವಿ. ಆದ್ರೆ ಇಲ್ಲೋಬ್ಬ ಯುಕ ಮಾಡಿರೋದು ನೋಡಿ. ಬೈಕ್‌ ಮೇಲೆ ಅಪಾಯಕಾರಿ ಸಾಹಸ ಮಾಡುತ್ತ ಪಟಾಕಿ ಸಿಡಿಸಿ ಪೋಲಿಸರ ಅತಿಥಿಯಾಗಿದ್ದಾನೆ.

ಹೌದು ಈ ಘಟನೆ ನಡೆದಿದ್ದು ತಮಿಳುನಾಡಿನ (Tamil Nadu) ಸಿರುಮಾರುತೂರ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ, ಬೈಕ್‌ಗೆ ಪಟಾಕಿಗಳನ್ನು ಜೋಡಿಸಿದ ಆರೋಪಿ ವೀಲಿಂಗ್‌ ( bike stunt ) ಮಾಡುತ್ತಾ ಪಟಾಕಿ ಸಿಡಿಸಿದ್ದಾನೆ. ಯುವಕನ ವೀಲಿಂಗ್‌ ಹುಚ್ಚಾಟದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಬಂಧಿತನನ್ನು ತಂಜಾವೂರು ನಿವಾಸಿ ಎಸ್ ಅಜಯ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಾದ್ಯಂತ ಇಂತಹ ಕೃತ್ಯಗಳಲ್ಲಿ ತೊಡಗಿರುವ ಇನ್ನೂ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ಅಧಿಕಾರಿಗಳ ತಂಡ ನಿಗಾ ವಹಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


[ays_poll id=3]