This is the title of the web page
This is the title of the web page
Crime NewsState NewsVideo News

ಗೊಶಾಲೆ ರಸ್ತೆಯಲ್ಲಿನ ಡಾ.ಭಾಲ್ಕಿ ಆಸ್ಪತ್ರೆ ಕಟ್ಟಡದಲ್ಲಿ ಬೆಂಕಿ : ರೋಗಿಗಳು ಶಿಫ್ಟ್..!


K2kannadanews.in

Fire on building ರಾಯಚೂರು : ನಗರದ ಗೋಶಾಲೆ ರಸ್ತೆಯಲ್ಲಿರು ಡಾ.ಭಾಲ್ಕಿ ಆಸ್ಪತ್ರೆ (Dr.balki hospital) ಕಟ್ಟಡದಲ್ಲಿ ಬೆಂಕಿ (Fire) ಕಾಣಿಸಿಕೊಂಡು, ಆಸ್ಪತ್ರೆಯಲ್ಲಿ ಹೋಗೆ (foog) ಆವರಿಸಿದ ಹಿನ್ನೆಲೆ ಕೆಲಹತ್ತು ಆತಂಕಕ್ಕೆ ಒಳಗಾಗಿತ್ತು. ಕೂಡಲೇ ಆಸ್ಪತ್ರೆ ಸಿಬ್ಬಂದಿಗಳು (Staff) ಅಲ್ಲಿರುವ 9 ಒಳರೋಗಿಗಳನ್ನು (Patients) ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಹೌದು ರಾಯಚೂರು (Raichur) ನಗರದ ಗೋಶಾಲೆ ರಸ್ತೆಯಲ್ಲಿರು (Goshala road) ಡಾ.ಭಾಲ್ಕಿ ಆಸ್ಪತ್ರೆ ಕೆಳಗಿನ‌ ಖಜಾರಿಯಾ ಟೈಲ್ಸ್ (Kajariya tiles) ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡದಿಂದ ಟೈಲ್ಸ್ ಅಂಗಡಿಯಲ್ಲಿನ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು (Material) ಸುಟ್ಟು ಹೋಗಿವೆ ಎನ್ನಲಾಗುತ್ತಿದೆ. ಅಂಗಡಿಯಲ್ಲಿದ್ದ ಟೈಲ್ಸ್, ಸಿಂಟೆಕ್ಸ್ (Sintax), ಪೈಪ್ (Pipe) ಗಳು ಸೇರಿ ಸಾಕಷ್ಟು ಸಾಮಗ್ರಿಗಳು ಸುಟ್ಟು ಹೋಗಿವೆ. ಕೆಳಗೆ ಹೊತ್ತಿಕೊಂಡ ಬೆಂಕಿಯಿಂದ, ಆಸ್ಪತ್ರೆಯಲ್ಲಿ ಹೊಗೆ ಆವರಿಸಿದ್ದು, ಕೆಲ ಹೊತ್ತು ಆತಂಕದ ವಾತಾವರಣ (Environment) ನಿರ್ಮಾಣವಾಗಿತ್ತು.

ಕೂಡಲೇ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿಗಳು, ಆಸ್ಪತ್ರೆಯಲ್ಲಿ ಒಂಬತ್ತು ಜನ ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಕೂಡಲೇ ಬೆರದು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ (Sniffed) ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.‌ ಬೆಂಕಿ ನಂದಿಸಿರುವ ಅಗ್ನಿಶಾಮಕ ದಳ ಸಿಬ್ಬಂದಿ, ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಇನ್ನೂ ಸದರ ಬಜಾರ್ ಪೊಲೀಸ್ ಠಾಣಾ (police station) ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.


[ays_poll id=3]