KPTCL ಎಓ ವಿರುದ್ಧ FIR ದಾಖಲಾಗಿದೆ
![]() |
![]() |
![]() |
![]() |
![]() |
ರಾಯಚೂರು : ಅರ್ಜಿ ವಿಲೇವಾರಿ ಮಾಡದೆ ವಿಳಂಬ ನೀತಿ ಅನುಸರಿಸಿರೋ ಹಿನ್ನೆಲೆಯಲ್ಲಿ ಲಿಂಗಸೂಗುರು KPTCL ಎಓ ವಿರುದ್ಧ FIR ದಾಖಲಾಗಿರುವ ಘಟನೆ ನಡೆದಿದೆ.
ಹೌದು ರಾಯಚೂರು ಜಿಲ್ಲೆಯ ಲಿಂಗಸೂಗರು ತಾಲೂಕಿನ KPTCL ಕಚೇರಿಯ AO ಅಂದ್ರೆ ಆಡಳಿತಾಧಿಕಾರಿ ಸಲೀಂ ವಿರುದ್ಧ ಜೈಬು ನೀಸಾ ಬೇಗಂ ಮುದ್ಗಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಂಚಣಿಗಾಗಿ ಜೈಬು ನೀಸಾ ಬೇಗಂ ಅರ್ಜಿ ಸಲ್ಲಿಸಿದ್ರು. ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡದೆ ವಿಳಂಬ ನೀತಿ ಅನುಸರಿಸಿರೋ ಎಓ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಎಷ್ಟೇ ಅಲೆದಾಡಿದ್ರೇ KPTCL ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ AO ಸಲೀಂರನ್ನ ಸಸ್ಪೆಂಡ್ ಮಾಡಿ ನಮಗೆ ನ್ಯಾಯ ಕೊಡಿಸಿ ಎಂದು ಜೈಬುನೀಸ್ ಬೇಗಂ ಪಟ್ಟು ಹಿಡಿದಿದ್ದಾರೆ.
![]() |
![]() |
![]() |
![]() |
![]() |