This is the title of the web page
This is the title of the web page
State News

ರಾಯಚೂರು ಸಿಇಓ ವಿರುದ್ಧ FIR ದಾಖಲು..?


K2kannadanews.in

ರಾಯಚೂರು : ದೇವದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ನಡೆದ 150 ಕೋಟಿಗೂ (core) ಅಧಿಕ ಮೊತ್ತದ ಭ್ರಷ್ಟಾಚಾರ(Corruption) ಪ್ರಕರಣದಲ್ಲಿ ಸರ್ಕಾರದ ಆದೇಶ ಉಲ್ಲಂಘನೆ (Violation of order) ಆರೋಪದಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ (lokayuktha court) ರಾಯಚೂರು ಸಿಇಒ ವಿರುದ್ಧ ದೂರು (complent against CEO) ದಾಖಲಾಗಿದೆ.

ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ 150 ಕೋಟಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನಾ ತಂಡ(Social Audit Team) ವರದಿ ಸರಕಾರಕ್ಕೆ ಸಲ್ಲಿಸಿತ್ತು. ಇದೇ ಬರದೇ ಆದರಿಸಿ ಈಗಾಗಲೇ 6 ಪೀಡಿಓಗಳನ್ನ ಅಮಾನತ್ತು ಮಾಡಲಾಗಿತ್ತು. ಆದರೆ ಸರ್ಕಾರ ಈ ಒಂದು ಭ್ರಷ್ಟಾಚಾರದಲ್ಲಿ ತೊಡಗಿರುವ ಅವರ ವಿರುದ್ಧ ಕ್ರಿಮಿನಲ್ ಕೇಸ್ (criminal case) ಮಾಡಲು ಆದೇಶಿಸಿತ್ತು.

ಆದರೆ ಇದುವರೆಗೆ ಕೇವಲ 6 PDOಗಳು ಅಮಾನತು ಆಗಿರುವುದು ಬಿಟ್ಟರೆ ಮತ್ತೇನು ಕ್ರಮ ಆಗಿಲ್ಲ. ಇದೇ ಹಿನ್ನಲೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ಕರ್ತವ್ಯ ಲೋಪ ಎಸಗಿದ್ದಾರೆ ಎಂದು ರಾಯಚೂರು ಸಿಇಓ ರಾಹುಲ್ ಪಾಂಡ್ವೆ ತುಕಾರಾಂ (Rahul pandwe tuhkaram) ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ, ನಾಗರಾಜ್ ಪಾಟೀಲ್ ಮತ್ತು ಶರಣಬಸವ ಹುಗಾರ್ ಎಂಬುವರು ದೂರು ದಾಖಲಿಸಿದ್ದಾರೆ. ಅಲ್ಲದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ದೂರು ಸಲ್ಲಿಸಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.


[ays_poll id=3]