This is the title of the web page
This is the title of the web page
Crime NewsNational News

ಮದುವೆ ಮನೆಲಿ ರಸಗುಲ್ಲಕ್ಕಾಗಿ ಫೈಟಿಂಗ್​ : ಆರು ಮಂದಿ ಆಸ್ಪತ್ರೆಗೆ ದಾಖಲು


K2kannadanews.in

ನ್ಯೂಸ್ ಡೆಸ್ಕ್ : ಮದುವೆ ಮನೆಗಳಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳ ಆಗೋದು ಸಾಮಾನ್ಯ. ಕ್ಷುಲ್ಲಕ ಕಾರಣಕ್ಕೆ ಮದುವೆ (wedding rasgulla fighting) ಮಂಟಪದಲ್ಲಿಯೇ ಮದುವೆ ನಿಂತು ಹೋದ ಅನೇಕ ಪ್ರಕರಣಗಳು ನಮ್ಮ ಸುತ್ತಮುತ್ತ ನಡೆದಿವೆ. ಮದುವೆಯ ಮನೆಯ ಸಿಹಿ(sweet) ತಿಂಡಿಗಳಿಗೂ ಕಿರಿಕ್ ಗಳು ನಡೆದಿದೆ. ನಾವು ಈ ವಿಚಾರ ಮಾತನಾಡೋಕು ಕಾರಣ ಕೂಡ ಇದೆ.

ಉತ್ತರ ಪ್ರದೇಶದಲ್ಲಿ ಸೋಮವಾರ(Monday) ನಡೆದ ಮದುವೆ ಕಾರ್ಯಕ್ರಮದಲ್ಲಿ ರಸಗುಲ್ಲಾ ಕಡಿಮೆಯಾದ (Shortage of rasagullas ) ಕಾರಣ ಗಲಾಟೆ ನಡೆದಿದ್ದು ಈ ಗಲಾಟೆಯಲ್ಲಿ 6ಮಂದಿ ಗಾಯಗೊಂಡಿದ್ದಾರೆ(injured) ಎಂದು ವರದಿಯಾಗಿದೆ. ಊಟದ ಸಂದರ್ಭದಲ್ಲಿ ರಸಗುಲ್ಲಾ ಕಡಿಮೆಯಾಗಿರೋದು ಗಮನಕ್ಕೆ ಬಂದಿದೆ. ಇದೇ ವಿಚಾರವಾಗಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದವರ ನಡುವೆ ಗಲಾಟೆ ಏರ್ಪಟ್ಟಿದೆ ಎನ್ನಲಾಗಿದೆ.

ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ(hospital) ದಾಖಲು ಮಾಡಲಾಗಿದ್ದು ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು(doctor) ಮಾಹಿತಿ ನೀಡಿದ್ದಾರೆ.ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಶಂಸಾಬಾದ್​ ಪೊಲೀಸರು ಮಾಹಿತಿ ನೀಡಿದ್ದಾರೆ.


[ays_poll id=3]