This is the title of the web page
This is the title of the web page
National NewsVideo News

ಜೀವಂತ ಹುಂಜ ಗೂಳಿಗೆ ತಿನ್ನಿಸಿ ವಿಕೃತಿ : ವೀಡಿಯೋ ಹಾಕಿದವನ ವಿರುದ್ಧ FIR..


K2kannadanews.in

Viral News : ಇತ್ತೀಚಿನ ದಿನಗಳಲ್ಲಿ ವಿಚಿತ್ರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social media) ಹಾಕಲಾಗುತ್ತಿದೆ. ಅಂತ ವಿಡಿಯೋಗಳ ವಿರುದ್ಧ ಧ್ವನಿ ಎತ್ತಿ ಪ್ರಕರಣ ದಾಖಲಾಗಿರುವ ಸನ್ನಿವೇಶಗಳು ನಮ್ಮ ಮುಂದಿವೆ. ಇಲ್ಲೊಂದು ತಂಡ (Team) ಗೂಳಿಯೊಂದಕ್ಕೆ (Bull) ಜೀವಂತ ಹುಂಜ Cock) ತಿನ್ನಿಸಿ ವಿಕೃತಿ ಮೆರೆದ ಘಟನೆ ನಡೆದಿದೆ.

ಹೌದು ಸಂಕ್ರಾಂತಿ (Pongal) ಹಬ್ಬಕ್ಕೆ ತಮಿಳುನಾಡಿನಲ್ಲಿ (Thamilunadu) ಗೂಳಿಗಳನ್ನು ಮಣಿಸಲಾಗುವ ಜಲ್ಲಿಕಟ್ಟು (Jallikattu) ಸ್ಫರ್ಧೆಯನ್ನು ಆಯೋಜಿಸಲಾಗುತ್ತದೆ. ಈಗಾಗಲೇ ಹಲವು ವಿಚಾರಗಳಿಗೆ ಈ ಕ್ರೀಡೆ ಹೆಸರುವಾಸಿಯಾಗಿದೆ. ಸ್ಫರ್ಧೆಯಲ್ಲಿ ಭಾಗಿಯಾಗುವ ಗೂಳಿಗಳಿಗೆ ಹೆಂಡ (Alkoahal) ಕುಡಿಸಿ ಖಾರದ ಪುಡಿಯನ್ನು ಕಣ್ಣುಗಳಿಗೆ ಮೆತ್ತಲಾಗುತ್ತದೆ ಎಂಬ ದೂರುಗಳು ಸಹ ಕೇಳಿಬಂದಿವೆ. ಇವುಗಳ ಮಧ್ಯ ಈ ಒಂದು ವೀಡಿಯೋ ಮತ್ತಷ್ಟು ಅಸಮಧಾನಗಳನ್ನು ಹೊರಹಾಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ (Viral) ಆಗಿರುವ, ತಮಿಳುನಾಡಿನ ಸೇಲಂ (Selam) ಜಿಲ್ಲೆಯ ತಾರಮಂಗಲಂನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಯುಟ್ಯೂಬರ್ (Youtuber) ವಿರುದ್ಧ FIR ದಾಖಲಿಸಿದ್ದು, ಆತನಿಗಾಗಿ ಶೋಧ (Sourcing) ನಡೆಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಜೀವಂತ ಹುಂಜವನ್ನು ಬಲವಂತವಾಗಿ (Compulsively) ಗೂಳಿಗೆ ತಿನ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಜಲ್ಲಿಕಟ್ಟುವಿನಲ್ಲಿ ಭಾಗಿಯಾಗುವ ಗೂಳಿ ಬಲವಂತವಾಗಿ ಅಗೆದು ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋವನ್ನು ರಘು (Raghu) ಎಂಬಾತ ತನ್ನ ಯುಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.


[ays_poll id=3]