This is the title of the web page
This is the title of the web page
Crime News

ಮಾಜಿ ಶಾಸಕರ ಅಳಿಯನ ಕಾರು ಡಿಕ್ಕಿ : ಕುರಿಗಾಯಿ ಸಾವು


ಲಿಂಗಸುಗೂರು : ಮಾಜಿ ಶಾಸಕನ ಅಳಿಯ ಕುಡಿದು ಕಾರು ಚಾಲನೆ ಮಾಡಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಕುರಿಗಾಯಿಗೆ ಡಿಕ್ಕಿ ಹೊಡೆದ ಕಾರಣ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ ಎಂದು ಆರೋಪಿಸಲಾಗುತ್ತಿದೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದ ಪಿಕಳಿಹಾಳ ಗ್ರಾಮದ ಬಳಿ ಘಟನೆ ಜರುಗಿದೆ. ಮುದುಗಲ್ ನಿಂದ ತಾವರಗೇರಾ ಕಡೆ ಹೊರಟ್ಟಿದ್ದ KA 35.5339 ನಂಬರ್ ನ ಎರ್ಟಿಗಾ ಕಾರು. ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಕುರಿಗಾಯಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಪಿಕಳಿಹಾಳ ಗ್ರಾಮದ ಯುವಕ ಬಸವರಾಜ್ (20) ಮೃತಪಟ್ಟ ದುರ್ಧೈವಿ.

 

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ ಅವರ ಅಳಿಯ, ಶರಣಬಸವ ವ್ಯಾಕರನಾಳ ಅವರ ಕಾರು ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಡ್ರಿಂಕ್ ಆ್ಯಂಡ್ ಡ್ರೈವ್ ಕಾರಣವೇಂದು ಆರೋಪಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]