This is the title of the web page
This is the title of the web page
Crime NewsState News

ಕಾಮುಕ ಶಿಕ್ಷಕ : ಸ್ಪೆಷಲ್ ಕ್ಲಾಸ್ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ..?


K2kannadanews.in

Crime News ಯಾದಗಿರಿ : ಸರಕಾರಿ ಶಾಲೆಯ (Government schoi) ಮುಖ್ಯ ಶಿಕ್ಷಕ (Head Master) ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ (Sexual harassment) ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ದೂರು ದಾಖಲಾಗಿ (Complent) ತನಿಖೆ ಆರಂಬಿಸಲಾಗಿದೆ.

ಯಾದಗಿರಿ (Yadagiri)ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕನಾಗಿದ್ದ, ಕಳೆದ 4 ವರ್ಷದಿಂದ ಶಾಲೆಯ ಮುಖ್ಯ ಶಿಕ್ಷಕನಾಗಿರುವ ಆರೋಪಿ ಹಣಮೇಗೌಡ. ಶಾಲೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತಿಸುವುದು, ಲೈಂಗಿಕ ಕಿರುಕುಳ ನೀಡುವುದು ಕೆಲಸ ಮಾಡಿಕೊಂಡ ಕಾಮುಕ, ಹಲವು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಆರೋಪ ಕೇಳಿಬಂದಿದೆ.

ಈಗಾಗಲೇ ಅನುಚಿತ ವರ್ತನೆ (inappropriate behaviour) ಆರೋಪದಡಿ ಮುಖ್ಯ ಶಿಕ್ಷಕ ಹಣಮೇಗೌಡನನ್ನು ಅಮಾನತುಗೊಳಿಸಿ (Suspend) ಆದೇಶ ಹೊರಡಿಸಿರೋ ಸಿಇಓ(CEO) ಗರೀಮಾ ಪನ್ವಾರ್. ಬಳಿಕ ನಾಲ್ಕು ಜನ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ (Officers team) ಶಾಲೆ ಭೇಟಿ ನೀಡಿ ಮಕ್ಕಳ ವಿಚಾರಣೆ ನಡೆಸಿದ್ದರು. ಅಧಿಕಾರಿಗಳ ಭೇಟಿ ವೇಳೆ ಶಾಲೆಯ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ನೀಡಿದ್ದ ಮಾಹಿತಿ ನೀಡಿದ್ದಾರೆ. ಪರಿಶೀಲನೆ ವರದಿಯು ನಿಜವೆಂದು ತಿಳಿದು ಯಾದಗಿರಿ ಡಿಡಿಪಿಐ (DDPI) ಮಂಜುನಾಥ ಎಚ್‌ಟಿ ಅವರು ಪೋಕ್ಸೊ (POCSO) ಅಡಿ ಶಿಕ್ಷಕ ಹಣಮೇಗೌಡ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ವಿಚಾರಣೆ ನಡೆಸುತ್ತಿರುವ ಪೊಲೀಸರು.


[ays_poll id=3]