
K2 ನ್ಯೂಸ್ ಡೆಸ್ಕ್ : ಎಲೆಕ್ಟ್ರಿಕ್ ಕಾರು ತಗೋಬೇಕು ಅಂತ ಕನಸು ಕಾಣ್ತಿರೋ ಒಂದಷ್ಟು ಜನ ಈ ವಿಡಿಯೋ ನೋಡಿ. ಕಣ್ಣು ಮುಂದೆಯೇ ಧಗ ಧಗನೆ ಉರಿದು ಬ್ಲಾಸ್ಟ್ ಆದ ಕಾರು.
ಬೆಂಗಳೂರಿನ ಜೆ.ಪಿ ನಗರದ ದಾಲ್ಮಿಯಾ ಮೇಲ್ಸೇತುವೆಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ. ಸ್ವತಃ ಕಾರು ಮಾಲೀಕರೇ ಚಾಲಾಯಿಸುತ್ತಿದ್ದು, ಈ ವೇಳೆ ಬಾನೆಟ್ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅವರು ತಕ್ಷಣ ಕಾರು ನಿಲ್ಲಿಸಿ ಹೊರ ಬಂದಿದ್ದಾರೆ.
ನೋಡ ನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿದಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
#Bengaluru: An #electric #car caught #fire near Dalmia Circle in #JPNagar area today. No casualties. Reason is yet to be ascertained.@NammaBengaluroo @WFRising @0RRCA @TOIBengaluru @anandmahindra @namma_BTM @east_bengaluru @icindngr @RisingVarthur pic.twitter.com/5J0pWjOjn1
— Rakesh Prakash (@rakeshprakash1) September 30, 2023
ಈ ಘಟನೆಯ ವಿಡಿಯೋವನ್ನು ಸಾರ್ವಜನಿಕರು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
![]() |
![]() |
![]() |
![]() |
![]() |
[ays_poll id=3]