This is the title of the web page
This is the title of the web page
National News

ಇ-ಕೆವೈಸಿ ಯಿಂದ ಸಬ್ಸಿಡಿ ಸುಳ್ಳು ಸುದ್ದಿ..?


K2kannadanews.in

News Desk : ಸಿಲೆಂಡರ್ ಹೊಂದಿರುವವರು ಬ್ಯಾಂಕ್ ಖಾತೆಗೆ, ಆಧಾರ್ ಇ-ಕೆವೈಸಿ (E-KYC) ಮಾಡಿಸಬೇಕಿದೆ. ಇದಕ್ಕೆ ಅಂತಿಮ ದಿನಾಂಕ (Last Date) ನಿಗದಿ ಮಾಡಲಾಗಿದೆ, ಇಲ್ಲವಾದಲ್ಲಿ ಸಬ್ಸಿಡಿ (Subsidy)
ದೊರೆಯುವುದಿಲ್ಲ ಎಂಬ ಉಳ್ಳು ಸುದ್ದಿಗಳು ಜನರಲ್ಲಿ ಗೊಂದಲ ಉಂಟು ಮಾಡಿ ಅಂಗಡಿ ಮುಂದೆ ಸರದಿ ಸಾಲು ನಿಲ್ಲುತ್ತಿದ್ದಾರೆ.

ಹೌದು ಅಡುಗೆ ಅನಿಲ ಸಂಪರ್ಕ (Cooking gas connection) ಹೊಂದಿರುವ ಫಲಾನುಭವಿಗಳು ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಎಂಬದು ಸುಳ್ಳು. ಈ ವದಂತಿಗೆ ಕಿವಿಗೊಡದಿರಿ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಕರೆ ನೀಡಿದೆ. ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಸಿಗುತ್ತದೆ ಹಾಗೂ ಸಿಲಿಂಡರ್ (Cylinder) ಸರಬರಾಜು ಮಾಡಲಾಗುತ್ತದೆ ಎನ್ನುವುದು ಸುಳ್ಳು (Fack News).

ಉಜ್ವಲ(Ujwal) ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರುವವರು ಆಧಾರ್ (Adhar) ಸಂಖ್ಯೆ ದಾಖಲಾತಿಯೊಂದಿಗೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ತೆರಳಿ ಇ-ಕೆವೈಸಿ ನೀಡಬಹುದಾಗಿದೆ. ಅಲ್ಲದೇ ಇ-ಕೆವೈಸಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು (Free), ಇದಕ್ಕೆ ಸಂಬಂಧಿಸಿದಂತೆ ಯಾವುದೇ ಶುಲ್ಕ ನಿಗದಿಪಡಿಸಿಲ್ಲ. ಜನರು ತಮ್ಮ ಬಿಡುವಿನ ವೇಳೆಯಲ್ಲಿ(Free Time) ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದಾದೆ.

ಒಬ್ಬ ಗ್ರಾಹಕ ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕ ಹೊಂದಿದ್ದರೆ ಅದನ್ನು ಪತ್ತೆ ಹಚ್ಚುವ ಸಲುವಾಗಿ ಗ್ಯಾಸ್ ಏಜೆನ್ಸಿಗಳು ಇ-ಕೆವೈಸಿ ಮಾಡಿಸಬೇಕು ಎಂದು ಹೇಳಿವೆ. ಗೃಹ ಬಳಕೆ ಸಿಲಿಂಡರ್‌ಗಳ ದುರ್ಬಳಕೆ ತಡೆಯಲು ತೈಲ ಕಂಪನಿಗಳು ಏಜೆನ್ಸಿಗಳಿಗೆ ಗ್ರಾಹಕರ ಇ-ಕೆವೈಸಿ ಮಾಡಿಸಲು ಆದೇಶಿಸಿವೆ. ಆದರೆ ಇದಕ್ಕೆ ಅಂತಿಮ ದಿನಾಂಕ ನಿಗದಿಗೊಳಿಸಿಲ್ಲ. ಅಲ್ಲದೇ ಇ-ಕೆವೈಸಿ ಮಾಡಿಸದಿದ್ದರೆ ಸಿಲಿಂಡರ್ ಸಬ್ಸಿಡಿ ಸಹ ಕಡಿತವಾಗಲಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದ ಮೂಲಕ ಹರಿದಾಡುತ್ತಿವೆ.


[ays_poll id=3]