This is the title of the web page
This is the title of the web page
Crime NewsLocal NewsVideo News

ಚಲಿಸುತ್ತಿದ್ದ ಲಾರಿಗೆ ಹೈಟೆನ್ಷನ್ ವೈರ್ ತಗುಲಿ ಚಾಲಕ ಸಾವು..?


K2kannadanews.in

Electric shock ಮಾನ್ವಿ : ಚಲಿಸುತ್ತಿದ್ದ ಲಾರಿಗೆ (Lorry) ಹೈಟೆನ್ಷನ್ ವೈರ್ (Electric shock) ತಗುಲಿ ಚಾಲಕ ದಾರುಣವಾಗಿ ಮೃತಪಟ್ಟ ಘಟನೆ ಯಡಿವಾಳ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಯಡಿವಾಳ ಗ್ರಾಮದಲ್ಲಿ ನಡೆದಿದೆ. ಅಜಯ್ ಕುಮಾರ್ (ajey kumar)35) ಮೃತ ದುರ್ದೈವಿ. ಜಾರ್ಖಂಡ್ (Jarkhand) ಮೂಲದ ಚಾಲಕ ಅಜಯ್ ಕುಮಾರ್, ಲಾರಿಯಲ್ಲಿ ಹಿಟಾಚಿ (Hitachi) ಸ್ಥಳಾಂತರ ಮಾಡುತ್ತಿದ್ದ ವೇಳ ಘಟನೆ ಜರುಗಿದೆ. ಚಲಿಸುತ್ತಿದ್ದ ಲಾರಿಗೆ (moving lorry) ಸುಮಾರು 11 ಕೆವಿಯ (11 KV vair) ಹೈಟೆನ್ಷನ್‌ ವೈರ್ ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದರಿಂದ ಲಾರಿಯು ಏಕಾಏಕಿ ಬೆಂಕಿಯಿಂದ (Fire) ಹೊತ್ತಿ ಉರಿದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ (manvi police station) ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.


[ays_poll id=3]