This is the title of the web page
This is the title of the web page
State News

ಮಂತ್ರಾಲಯ ರಾಯರ ಮಠಕ್ಕೆ ಹೆಲಿಕಾಪ್ಟರ್‌ ಕೊಡುಗೆ ನೀಡಿದ ರಾಮನಗರ ಭಕ್ತ..


K2kannadanews.in

ರಾಯಚೂರು : ದೇವಾಲಯಗಳಿಗೆ ಹರಕೆ ಕಟ್ಟಿ ನಗದು(money), ಚಿನ್ನಾಭರಣ(gold jewelry) ಕಾಣಿಕೆಯಾಗಿ ಕೊಡುವ ಭಕ್ತರನ್ನು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಭಕ್ತ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೆಲಿಕಾಪ್ಟರ್‌ (helicopter) ಕೊಡುಗೆ ನೀಡವುದಾಗಿ ತಿಳಿಸಿದ್ದಾರೆ.

ಹೌದು ರಾಮನಗರದ(ramanagar) ಶ್ರೀ ಫೌಂಡೇಶನ್‌ ಸಂಸ್ಥಾಪಕ ಸುರೇಶ್‌(suresh) ಅವರು ಮಂತ್ರಾಲಯ(mantralaym) ಮಠದ ಪೀಠಾಧಿಪತಿ ಡಾ. ಸುಬುಧೇಂದ್ರ ತೀರ್ಥರಿಗೆ ಹೆಲಿಕಾಪ್ಟರ್‌ ನೀಡುವುದಾಗಿ ತಿಳಿಸಿದ್ದು, ಶೀಘ್ರದಲ್ಲೇ ಹೆಲಿಪ್ಯಾಡ್‌ ಕಾಮಗಾರಿ ಆರಂಭಿಸಲಾಗುತ್ತದೆ. ಕಾಮಗಾರಿ ಪೂರ್ಣಗೊಂಡರೆ ಸಂಕ್ರಾಂತಿ(sankranti) ಹಬ್ಬಕ್ಕೆ ಮಂತ್ರಾಲಯದ ಶ್ರೀಗಳಿಗೆ ಹೆಲಿಕಾಪ್ಟರ್ ಹಸ್ತಾಂತರಿಸುವ ಪ್ರಯತ್ನ ಮಾಡಲಾಗುತ್ತದೆ. ಈ ಬಗ್ಗೆ ಶ್ರೀಗಳೊಂದಿಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ.

ಇನ್ನು ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ 253 ಅಡಿ ಎತ್ತರದ ರಾಘವೇಂದ್ರ ಸ್ವಾಮಿ ವಿಗ್ರಹ(idol) ನಿರ್ಮಿಸಲಾಗುತ್ತಿದೆ. ಡಿಸೆಂಬ‌ರ್‌ನಲ್ಲಿ (dismember) ಸುಬುದೇಂದ್ರ ತೀರ್ಥರು ಮೂರ್ತಿ ಪ್ರತಿಷ್ಠಾಪನೆಗೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

 


[ays_poll id=3]