
ಸಿರವಾರ : ರಾಜ್ಯದ ಅಭಿವೃದ್ದಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನಿಂದ ಮಾತ್ರ ಸಾಧ್ಯ, ಅಧಿಕಾರಕ್ಕೆ ಬಂದಾಗಲೆಲ್ಲ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ದಿ ಮಾಡಿದೆ, 2023 ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಅಧಿಕಾರ ಬಂದರೆ ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಮಾನ್ವಿ ಶಾಸಕ ರಾಜ ವೆಂಕಟಪ್ಪ ನಾಯಕ್ ಹೇಳಿದರು.
ಈಗಾಗಲೇ ರಾಜ್ಯಾದಾದ್ಯಂತ ಈ ಪಂಚರತ್ನ ಯೋಜನೆಯ ರಥಯಾತ್ರೆಯು ಮಾನ್ವಿ ಕ್ಷೇತ್ರಕ್ಕೆ 28ರಂದು ಆಗಮಿಸುತ್ತದೆ ಎಲ್ಲಾ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಾನ್ವಿ ಕ್ಷೇತ್ರದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಇದೇ 28 ಕ್ಕೆ ಮಾನ್ವಿ ಕ್ಷೇತ್ರಕ್ಕೆ ಬರಲಿದೆ. ಕಲ್ಲೂರಿನಿಂದ ಕ್ಷೇತ್ರಕ್ಕೆ ಬರಮಾಡಿಕೊಂಡು ಒಂದು ದಿನ ಪೂರ್ತಿ ಕ್ಷೇತ್ರದಾದ್ಯಂತ ಸಂಚರಿಸಲಿದೆ. ಅರ್ಥವಿಲ್ಲದ ಬಿಜೆಪಿ ಜನರಿಲ್ಲದ ಜನ ಸಂಪರ್ಕ ಯಾತ್ರೆ, ಕಾಂಗ್ರೆಸ್‌ನವರ ಭಾರತ ಜೋಡೊ ಯಾತ್ರೆಗೆ ಜನರು ವ್ಯಂಗ್ಯ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇಲ್ಲದೆ ಇದ್ದರೂ ರೈತರಿಗೆ 2ಬೆಳೆಗೆ ನೀರು ಕೊಟ್ಟಿರುವೆ, ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿರುವೆ ಎಂದರು.
![]() |
![]() |
![]() |
![]() |
![]() |
[ays_poll id=3]