This is the title of the web page
This is the title of the web page
State News

ಜಿಲ್ಲೆಯ ಅಭಿವೃದ್ಧಿಗೆ ಜನರು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಸಾಧ್ಯ


K2 ಪೊಲಿಟಿಕಲ್ ನ್ಯೂಸ್ : ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದ್ದಾರೆ. ಜಿಲ್ಲೆಯ ಸಮಸ್ಯೆಗಳ ನಿವಾರಣೆಗೆ ಸಾರ್ವಜನಿಕರೊಂದಿಗೆ ಜನಪ್ರತಿನಿಧಿಗಳ ಅಗತ್ಯವಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜ ಹೇಳಿದರು.

ಬೆಂಗಳೂರಿನ ವಿಕಾಸೌದ ತಮ್ಮ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಷ್ಟ್ರ ಮತ್ತು ರಾಜ್ಯದಲ್ಲಿ ಬೆಂಗಳೂರು ಹೈದರಾಬಾದ್ ಅಂತ ನಗರಗಳು ಟಾಪ್ ಸಿಟಿ ಆಗಲು ಇನ್ವೆಸ್ಟ್ಮೆಂಟ್ ಮಾಡಿ ಅಭಿವೃದ್ಧಿ ಮಾಡಲಾಗಿದೆ. ನಾನು ರಾಯಚೂರು ಜಿಲ್ಲೆಯ ಸಚಿವರಾದ ಮೇಲೆ ಸಾಕಷ್ಟು ನಿರೀಕ್ಷೆಗಳು ನನ್ನ ಮೇಲೆ ಇವೆ. ಮೂಲಭೂತ ಸಮಸ್ಯೆಗಳು ಜಿಲ್ಲೆಯಲ್ಲಿ ಸಾಕಷ್ಟು ಕಾಡುತ್ತಿದೆ, ಇದರೊಂದಿಗೆ ವಿವಿಧ ಸಮಸ್ಯೆಗಳು ಜಿಲ್ಲೆಯನ್ನ ಕಾಡುತ್ತಿದ್ದು ಇವುಗಳ ನಿವಾರಣೆಗೆ ಸಮಯ ಬೇಕಾಗುತ್ತದೆ.

ಜಿಲ್ಲೆಯ ಯಾವುದೇ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ಜಿಲ್ಲಾಡಳಿತ, ನಗರಸಭೆ, ಸಾರ್ವಜನಿಕರು ಮುಖ್ಯವಾಗಿ ಎಲ್ಲಾ ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ. ಅವರೆಲ್ಲರ ಸಹಕಾರದೊಂದಿಗೆ ಜಿಲ್ಲೆಯ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ಹೇಳಿದರು.


[ays_poll id=3]