
ರಾಯಚೂರು : ಎಲ್ಲ ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಲು ಒಕ್ಕೂಟ ರಚನೆ ಮಾಡಲಾಗಿದ್ದು ಹಿಂದುಳಿದ ಜಾತಿಗಳ ಏಳಿಗೆಗಾಗಿ ಕೈಗೊಳ್ಳಬೇಕಾದ ರೂಪುರೇಷೆಗಳನ್ನು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲು ಡಿ.25 ರಂದು ಗದ್ವಾಲ್ ರಸ್ತೆಯ ಲಕ್ಷ್ಮಮ್ಮ ದೇವಸ್ಥಾನದ ಸಭಾಭವನದಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಹೇಳಿದರು.
ಶೇ.56 ಪ್ರತಿಶತ ಇರುವ ಹಿಂದುಳಿದ ಜಾತಿಗಳು ಒಂದಾಗದೆ ಇರುವುದರಿಂದ ನಮಗೆ ನ್ಯಾಯಯುತವಾಗಿ ದೊರೆಯಬೇಕಾದ ಸವಲತ್ತುಗಳು ದೊರೆಯುತ್ತಿಲ್ಲ. ಇತ್ತೀಚಿನ ಬೆಳವಣಿಗೆಗಳೂ ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಪೂರಕವಾಗಿಲ್ಲ. ಯಾರೂ ಕೇಳದಿದ್ದರೂ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿಯನ್ನು ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವುದು ಸಮಂಜಸವಲ್ಲ. ಯಾಕೆಂದರೆ ಆರ್ಥಿಕವಾಗಿ ಹಿಂದುಳಿದವರ 10 ಪ್ರತಿಶತ ಮೀಸಲಾತಿಯಲ್ಲಿ ಎಸ್.ಸಿ/ ಎಸ್.ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಅವಕಾಶವಿಲ್ಲ ಎಂದು ಹೇಳಿರುವುದು ಹಿಂದುಳಿದ ಜಾತಿಗಳ ಪಾಲನ್ನು ಕಸಿದುಕೊಳ್ಳುವುದೇ ಆಗಿದೆ.
ಕೇಂದ್ರದ ಸರಕಾರ ಶೇ.10 ರ ಮೀಸಲಾತಿಯನ್ನು ನಾವು ವಿರೋಧಿಸುತ್ತೇವೆ. ಸಂವಿಧಾನಪೀಠವು ಆ ಮೀಸಲಾತಿ ಜಾರಿಗೆ ಒಮ್ಮತದ ತೀರ್ಪು ನೀಡದೆ ಸಂವಿಧಾನ ಪೀಠದ ಮೂವರು ನ್ಯಾಯಾಧೀಶರು ಮೀಸಲಾತಿ ಜಾರಿಯ ಪರವಾಗಿ ಇನ್ನಿಬ್ಬರು ನ್ಯಾಯಾಧೀಶರ ವಿರುದ್ಧವಾಗಿ ತೀರ್ಪು ನೀಡಿರುವುದರಿಂದ ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬೇಕೆಂದು ಅವರು ಕೋರಿದರು.
![]() |
![]() |
![]() |
![]() |
![]() |
[ays_poll id=3]