This is the title of the web page
This is the title of the web page
National NewsState News

ಕೃಷ್ಣ ನದಿಯಲ್ಲಿ ದೊರೆತ ದಶಾವತಾರ ವಿಷ್ಣು ವಿಗ್ರಹ ತೆಲಂಗಾಣಕ್ಕೆ ಸೇರಿದಂತೆ..!


K2kannadanews.in

ರಾಯಚೂರು : ಕೃಷ್ಣ ನದಿಯಲ್ಲಿ (Krishna river) ದೊರೆತ ದಶಾವತಾರ ವಿಷ್ಣು ಹಾಗೂ ಶಿವಲಿಂಗ ವಿಗ್ರಹ (Idols) ವಿಚಾರ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಈ ಒಂದು ವಿಗ್ರಹ ತೆಲಂಗಾಣಕ್ಕೆ (Telangana) ಸೇರಿದ್ದು ಎಂಬ ಸುದ್ದಿ ಹರಡಿದ್ದು ಸ್ಥಳೀಯರಲ್ಲಿ ಒಂದಷ್ಟು ಅಸಮಾಧಾನ ಮೂಡಿಸಿದೆ.

ರಾಯಚೂರು ತಾಲೂಕಿನ ದೇವಸಗೂರು ಗ್ರಾಮದ ಬಳಿ ಇರುವ ಕೃಷ್ಣ ನದಿಯಲ್ಲಿ ಇಂದು ದೊರೆತ ವಿಗ್ರಹಗಳು ರಾಜ್ಯಾದ್ಯಂತ ಸುದ್ದಿ ಮಾಡಿದೆ. ನದಿಯಲ್ಲಿ ದೊರೆತ ವಿಗ್ರಹಗಳನ್ನು ಅಲ್ಲಿನ ಸ್ಥಳಿಯ ಯುವಕರು ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇರಿಸಿ ಪೂಜೆ ಮಾಡುತ್ತಿದ್ದಾರೆ. ತೆಲಂಗಾಣದ ಕೆಲ ಜನ ಬಂದು ವಿಗ್ರಹಗಳನ್ನು ನೋಡಿಕೊಂಡು ಹೋಗಿದ್ದಾರೆ. ಅದು ನಮಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ ಎಂಬು ದೂರುಗಳು ಬಂದಿದೆ.

ಸ್ಥಳಿಯರಾದ ಸೂಗಪ್ಪ ಅವರು ಮಾತನಾಡುತ್ತಾ, ತೆಲಂಗಾಣದಿಂದ ಬಂದ ಕೆಲ ಜನರು ನಮಗೆ ಸೇರಿದ್ದು ಎಂದು ಹೇಳುತ್ತಿದ್ದಾರಂತೆ, ಆದರೆ ಅದು ನಮ್ಮದು, ಅವರದ್ದು ಎಂದು ಭೇದ ಮಾಡದೆ ಪೂಜೆ ಮಾಡುತ್ತೇವೆ. ನಾವೆಲ್ಲ ಹಿಂದೂಗಳು ಏನು ಮಾಡಿದರು ಕೂಡಿ ಮಾಡುತ್ತೇವೆ ವಿವಾದ ಮಾಡಿಕೊಳ್ಳುವದಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.


[ays_poll id=3]