
K2 ನ್ಯೂಸ್ ಡೆಸ್ಕ್ : ಈ ದೇಶದಲ್ಲಿ ನಡೆಯುತ್ತಿರುವ ಸಂಘರ್ಷವೊಂದು ಅಲ್ಲಿನ ಮಕ್ಕಳಿಗೆ ಶಾಪವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಒಂದು ಸಂಘರ್ಷದಿಂದ 60 ಮಕ್ಕಳು ಹಸಿವಿನಿಂದ ಮೃತಪಟ್ಟ ಅಮಾನವೀಯ ಘಟನೆ ನಡೆದಿದೆ.
ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷ ಮಕ್ಕಳಿಗೆ ಶಾಪವಾಗಿ ಪರಿಣಮಿಸಿದೆ. ರಾಜಧಾನಿ ಖಾರ್ಟೂಮ್‌ನ ಅನಾಥಾಶ್ರಮದಲ್ಲಿ ಆಹಾರದ ಕೊರತೆ ಮತ್ತು ಹಸಿವಿನಿಂದ 6 ವಾರಗಳ ಅವಧಿಯಲ್ಲಿ 60 ಶಿಶುಗಳು ಸಾವನ್ನಪ್ಪಿವೆ.
ಇದರಲ್ಲಿ 26 ಕಂದಮ್ಮಗಳು ಕಳೆದ 2 ದಿನಗಳಲ್ಲಿ ಸಾವನ್ನಪ್ಪಿವೆ. ಸರಿಯಾದ ಆಹಾರದ ಕೊರತೆಯಿಂದ ಮಕ್ಕಳು ಜ್ವರದಿಂದ ಬಳಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಡಾನ್‌ನ ಸಂಘರ್ಷದಲ್ಲಿ ಇಲ್ಲಿಯವರೆಗೆ 900 ಜನರು ಸಾವನ್ನಪ್ಪಿದ್ದಾರೆ.
![]() |
![]() |
![]() |
![]() |
![]() |
[ays_poll id=3]