This is the title of the web page
This is the title of the web page
State News

ಕರೆಂಟ್​​ ಫ್ರೀ : ಬಾಡಿಗೆದಾರರು ಈ ಸುದ್ದಿ ಓದಲೇಬೇಕು..!


K2 ನ್ಯೂಸ್ ಡೆಸ್ಕ್ : ಕಾಂಗ್ರೆಸ್‌ನ ಬಹು ಉಪಯೋಗಿ ಈ ಯೋಜನೆ ಎಲ್ಲರ ಮನೆಯನ್ನ ಬೆಳಗಲಿದೆ ಅಂತಾ ಸರ್ಕಾರ ಹೇಳಿದೆ. ಇದನ್ನ ಜಾರಿಗೊಳಿಸಲು ಗೈಡ್‌ಲೈನ್ಸ್‌ನೂ ರಿಲೀಸ್ ಮಾಡಿದೆ. ಆದ್ರೆ, ಸರ್ಕಾರದ ಮಾರ್ಗಸೂಚಿಯೇ ಜನರನ್ನ ಗೊಂದಲಕ್ಕೆ ತಳ್ಳಿತ್ತು. ಬಾಡಿಗೆ ಮನೆಗಳಿಗೆ ಗ್ಯಾರಂಟಿ ಸಿಗುತ್ತೋ? ಇಲ್ವೋ ಎಂಬ ಸಂಶಯ ಜನಸಾಮಾನ್ಯರನ್ನ ಕಾಡಿತ್ತು. ಅದರಲ್ಲೂ ಬೆಂಗಳೂರಿನಂತ ಸಿಟಿಯಲ್ಲಿ ಬಾಡಿಗೆ ಮನೆಯಲ್ಲಿರೋ ಜನರಿಗೆ ಗೃಹಜ್ಯೋತಿ ಸಿಗುತ್ತೋ ಇಲ್ವೋ ಎಂಬ ಅನುಮಾನ ಮೂಡಿತ್ತು. ಬಾಡಿಗೆ ದಾರರಿಗೂ ಫ್ರೀ ವಿದ್ಯುತ್ ಹೇಗೆ ಸಿಗಲಿದೆ ಗೊತ್ತಾ.

ಇನ್ನೂ ಬಾಡಿಗೆ ಮನೆಗಳಲ್ಲಿ ವಾಸಿಸುವ ಬಾಡಿಗೆದಾರರಿಗೂ ಗೃಹಜ್ಯೋತಿ ಫ್ರೀ ವಿದ್ಯುತ್ ದೊರೆಯಲಿದೆ. ಒಂದು ಮನೆಯಲ್ಲಿ ಬಳಸಿದ 12 ತಿಂಗಳ ವಿದ್ಯುತ್‌ನ ಸರಾಸರಿಯಂತೆ ಉಚಿತ ವಿದ್ಯುತ್‌ ಯೂನಿಟ್‌ ನಿಗದಿಯಾಗಲಿದೆ.. ಸರಾಸರಿ ಜೊತೆಗೆ ಶೇಕಡ 10ರಷ್ಟು ಹೆಚ್ಚುವರಿ ಬಳಕೆಗೂ ಬಿಲ್ ಉಚಿತವಾಗಿರಲಿದೆ. ಸರಾಸರಿಗಿಂತ ಶೇ.10 ಮೀರಿದ್ರೆ ಹೆಚ್ಚುವರಿ ಯೂನಿಟ್‌ಗಷ್ಟೇ ಬಿಲ್‌ ಪಾವತಿಸಬೇಕು.. ಇನ್ನೂ 200 ಯೂನಿಟ್​ವರೆಗೆ ಮಾತ್ರ ಉಚಿತ ವಿದ್ಯುತ್‌ ಪ್ರಯೋಜನ ಸಿಗಲಿದೆ.. 200 ಯೂನಿಟ್‌ಗಿಂತ ಹೆಚ್ಚಾದ್ರೆ ಸಂಪೂರ್ಣ ಬಿಲ್‌ ಪಾವತಿಸಬೇಕು ಅಂತಾ ಸರ್ಕಾರ ಮಾರ್ಗಸೂಚಿ ನೀಡಿದೆ.

ಗೃಹಜ್ಯೋತಿ ಫ್ರೀ ವಿದ್ಯುತ್ ಸೌಲಭ್ಯದ ಲಾಭ ಬಾಡಿಗೆದಾರರು, ಲೀಸ್‌ದಾರರಿಗೂ ಕೂಡ ಸಿಗಲಿದೆ. ಬಾಡಿಗೆದಾರರು ಆರ್‌ಆರ್‌ ನಂಬರ್‌ಗೆ ಆಧಾರ್‌ ಲಿಂಕ್‌ ಮಾಡಬೇಕು, ಅಥವಾ ಮನೆ ಬಾಡಿಗೆ ಕರಾರು ಪತ್ರವನ್ನ ಅಪ್‌ಲೋಡ್‌ ಮಾಡಬಹುದು. ಇಲ್ಲದಿದ್ದರೆ ತಾವು ವಾಸ ಮಾಡುವ ಸ್ಥಳದ ವೋಟರ್‌ ಐಡಿ ಇದ್ದರೆ ಅದನ್ನೂ ಅಪ್‌ಲೋಡ್‌ ಮಾಡಬಹುದು. ಜೊತೆಗೆ ಡಿಎಲ್‌, ಪಾಸ್‌ಪೋರ್ಟ್‌, ರೇಷನ್‌ ಕಾರ್ಡ್‌ ಕೂಡಾ ನೀಡಬಹುದು. ಸೇವಾಸಿಂಧು ಪೋರ್ಟಲ್‌ ಮೂಲಕ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂತಾ ಸರ್ಕಾರ ಮಾಹಿತಿ ನೀಡಿದೆ.

ಹೀಗೆ, ಸೇವಾಸಿಂಧು ಪೋರ್ಟ್‌ಲ್‌ನಲ್ಲಿ ಗೃಹಜ್ಯೋತಿಗೆ ಅರ್ಜಿ ಹಾಕಿದ್ರೆ ಈ ಯೋಜನೆಗೆ ನೀವು ಅರ್ಹತೆಯನ್ನ ಹೊಂದಿದ್ದೇ ಆದ್ರೆ ವಿದ್ಯುತ್ ಉಚಿತ.. ಒಂದ್ವೇಳೆ ನಿಮ್ಮ ಸರಾಸರಿ 200 ಯೂನಿಟ್ ಮೀರಿದ್ರೆ ನಿಮ್ಮ ಮನೆಗೆ ಫುಲ್ ಬಿಲ್ ಬರೋದು ಖಚಿತ.


[ays_poll id=3]