
K2 ಪೊಲಿಟಿಕಲ್ ನ್ಯೂಸ್ : ಟ್ರಾನ್ಸ ಫರ್ ನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದನ್ನು ತಾವು ಲಂಚಪಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೇರೆ ಸಚಿವರು ಲಂಚ ಪಡೆಯುತ್ತಿರುವದರ ಬಗ್ಗೆ ಜಾರಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಶ್ಯಾಡೊ ಸಿಎಂ ವಿಚಾರದ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಹಲವು ವಿಚಾರ ಎತ್ತಿದ್ದೇವೆ. ಸಿಎಂ ಆಫೀಸ್ ನಿಂದ ಹಿಡಿದು ಎಲ್ಲಾ ಕಡೆಗೂ ಹೊರಗಿನವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ವರ್ಗಾವಣೆಯಲ್ಲಿ ನಾನು ಯಾವುದಕ್ಕೂ ಹಣ ತಗೊಂಡಿಲ್ಲಾ ಅಂತ ಸಿಎಂ ಹೇಳ್ತಾರೆ. ಸಿಎಂ ಸ್ವಂತಕ್ಕೆ ಹಣ ತಗೊಂಡಿಲ್ಲಾ ಅಂತಾ ಜಾರಿಕೊಳ್ಳುತ್ತಿದ್ದಾರೆ. ಇಡೀ ಅವರ ಸರ್ಕಾರ ಮಂತ್ರಿಮಂಡಳದ ಸದಸ್ಯರು, ಭಂಟರು ಲಂಚ ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಅಧಿಕಾರಗಳ ವಲಯದಲ್ಲಿ ಬಹಳ ದೊಡ್ಡ ಚರ್ಚೆ ಆಗುತ್ತಿದೆ. ಅದನ್ನು ಮುಚ್ಚಿ ಹಾಕುವ ಸಲುವಾಗಿ ನಾನು ಲಂಚ ತೆಗೆದುಕೊಂಡಿಲ್ಲಾ. ಲಂಚ ತೆಗೆದುಕೊಂಡಿದ್ದಾರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಿತ್ತೆನೆ ಅಂತ ಹೇಳುತ್ತಿದ್ದಾರೆ.
![]() |
![]() |
![]() |
![]() |
![]() |
[ays_poll id=3]