
K2 ಕೊವಿಡ್ ನ್ಯೂಸ್ : ಚೀನಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊವಿಡ್ ಪ್ರಕರಣಗಳು ಇದೀಗ ಮತ್ತೊಮ್ಮೆ ಇಡೀ ವಿಶ್ವವನ್ನೇ ಚಿಂತೆಗೀಡು ಮಾಡಲಾರಂಭಿಸಿವೆ. ಮಾಧ್ಯಮ ವರದಿಯೊಂದರ ಪ್ರಕಾರ ಚೀನಾ ಪ್ರಸ್ತುತ ವಿಶ್ವದಲ್ಲಿಯೇ ಅತಿ ದೊಡ್ಡ ಕೊವಿಡ್-19 ಪ್ರಕೋಪವನ್ನು ಹತ್ತಿಕ್ಕಲು ಹೆಣಗಾಡುತ್ತಿದೆ ಎಂದು ಹೇಳಿದೆ. ಚೀನಾದಲ್ಲಿ ಪ್ರತಿ 24 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಪ್ರಕರಣಗಳು ಹಾಗೂ 5000 ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಏರ್ ಫಿನಿಟಿ ಲಿಮಿಟೆಡ್ ಪ್ರಕಾರ, ಕೊವಿಡ್ ಪ್ರೋಟೋಕಾಲ್ ಗಳನ್ನು ತೆಗೆದುಹಾಕುವ ಚೀನಾದ ನಿರ್ಧಾರದಿಂದ ಪ್ರಸ್ತುತ ಅಲೆಯ ಪ್ರಕರಣಗಳು ಉಲ್ಬಣಗೊಂಡಿವೆ ಎನ್ನಲಾಗಿದೆ. ಒಮಿಕ್ರಾನ್ ನ ಹೊಸ ಉಪರೂಪಾಂತರಿ ಬಿಎಫ್.7 ಈ ಹೊಸ ಅಲೆಯ ಹೊರಹೊಮ್ಮುವಿಕೆಗೆ ಕಾರಣವಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಮುಂದಿನ 1 ತಿಂಗಳಲ್ಲಿ ಈ ದೈನಂದಿನ ಪ್ರಕರಣಗಳ ಸಂಖ್ಯೆ 3.7 ಮಿಲಿಯನ್ ಅಂದರೆ 37 ಲಕ್ಷಕ್ಕೆ ಮತ್ತು ಮಾರ್ಚ್ ಹೊತ್ತಿಗೆ ಇದು 4.2 ಮಿಲಿಯನ್ ಅಂದರೆ 42 ಲಕ್ಷಕ್ಕೆ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಿನ್ಪಿಂಗ್ ಸರ್ಕಾರದ ಈ ನಿರ್ಧಾರವೇ ಕಾರಣ ಎಂದು ಒತ್ತಿ ಹೇಳಿದೆ ಅನಾಲಿಟಿಕ್ ಸಂಸ್ಥೆ
ಇದಕ್ಕಾಗಿ ಏರ್‌ಫಿನಿಟಿ ಲಿಮಿಟೆಡ್ ಚೀನಾದ ಪ್ರಾಂತೀಯ ಡೇಟಾವನ್ನು ಬಳಸಿದೆ ಮತ್ತು ಕ್ಸಿ ಜಿನ್‌ಪಿಂಗ್ ಸರ್ಕಾರದ ನಿರ್ಧಾರವೇ ಇದಕ್ಕೆ ಕಾರಣ ಎಂದು ಒತ್ತಿಹೇಳಿದೆ, ಇದರಲ್ಲಿ ಅದು ತನ್ನ ವಿವಾದಾತ್ಮಕ ಶೂನ್ಯ ಕೋವಿಡ್ ನೀತಿಯನ್ನು ಇದ್ದಕ್ಕಿದ್ದಂತೆ ಕೈಬಿಟ್ಟಿದೆ. ಈ ನಿರ್ಧಾರದ ಬಗ್ಗೆ ಅಮೆರಿಕದ ಎಪಿಡೆಮಿಯಾಲಜಿಸ್ಟ್ ಎರಿಕ್ ಫೀಗೆಲ್-ಡಿಂಗ್, ‘ಯಾರಿಗೆ ಸೋಂಕು ತಗುಲಬೇಕು, ಅವರು ಸೋಂಕಿಗೆ ತಗುಲಲಿ… ಸಾಯಬೇಕಾದವರು ಸಾಯಲಿ’ ಎಂದು ಹೇಳಿದ್ದರು.
![]() |
![]() |
![]() |
![]() |
![]() |
[ays_poll id=3]