
K2 ಪೊಲಿಟಿಕಲ್ ನ್ಯೂಸ್ : ಲೋಕಸಭಾ ಚುನಾವಣೆಗೆ ಈಗಾಗಲೇ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಟಿಕೆಟ್ ಪಡೆಯಲು ಅಭ್ಯರ್ಥಿಗಳು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಈ ಮಧ್ಯ ಕಾಂಗ್ರೆಸ್ ಪಕ್ಷದಲ್ಲಿ ಅಚ್ಚರಿಯ ಸಂಗತಿ ಒಂದು ಹೊರಬಿದ್ದಿದೆ 8 ಹಾಲಿ ಸಚಿವರಿಗೆ ಟಿಕೆಟ್ ಆಗಿದೆಯಂತೆ.
ಹೌದು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನ 8 ಸಚಿವರಿಗೆ ಟಿಕೆಟ್ ಫಿಕ್ಸ್ ಆಗಿದೆ ಎಂದು ವರದಿಯಾಗಿದೆ. ಜಾತಿ, ಪ್ರದೇಶವಾರು, ವೈಯಕ್ತಿಕ ವರ್ಚಸ್ಸು ಪರಿಗಣಿಸಿ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ. KH ಮುನಿಯಪ್ಪ- ಕೋಲಾರ, HC ಮಹಾದೇವಪ್ಪ- ಚಾಮರಾಜನಗರ, ಚೆಲುವರಾಯಸ್ವಾಮಿ- ಮಂಡ್ಯ, ಕೃಷ್ಣಬೈರೇಗೌಡ- ಬೆಂ.ಉತ್ತರ, ದಿನೇಶ್ ಗುಂಡೂರಾವ್- ಬೆಂ.ಸೆಂಟ್ರಲ್ , ಪ್ರಿಯಾಂಕ್ ಖರ್ಗೆ- ವಿಜಯಪುರ, ಸತೀಶ್ ಜಾರಕಿಹೊಳಿ- ಬೆಳಗಾವಿ, ಈಶ್ವರ್ ಖಂಡ್ರೆ- ಬೀದರ್ ಸ್ಪರ್ಧೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
![]() |
![]() |
![]() |
![]() |
![]() |
[ays_poll id=3]