
ರಾಯಚೂರು : ಕಾಂಗ್ರೆಸ್ ಮತ್ತು ಬಿ ಜೆ ಪಿ ಪಕ್ಷಗಳು ದಲಿತರ ಬಗ್ಗೆ ಕೇವಲ ಬೂಟಾಟಿಕೆ ಕಾಳಜಿ ಹೊಂದಿವೆ. ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗ ಕಾರ್ಯಕರ್ತರ ಸಭೆ ಹಾಗೂ ಪಂಚರತ್ನ ಯೋಜನೆ ಪೂರ್ವಭಾವಿ ಸಭೆಯಲ್ಲಿ ಮಳವಳಿ ಶಾಸಕ ಡಾ ಅನ್ನದಾನಿ ಹೇಳಿದರು.
ನಗರದ ಅತ್ತನೂರ್ ಕಲ್ಯಾಣ ಮಂಟಪ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ, ಕಾರ್ಯಕ್ರಮ ಉದ್ಘಾಟಿಸಿದ ಮಳವಳಿ ಶಾಸಕ ಡಾ ಅನ್ನದಾನಿ ಮಾತನಾಡಿ ಕಾಂಗ್ರೆಸ್ ಮತ್ತು ಬಿ ಜೆ ಪಿ ಪಕ್ಷಗಳು ದಲಿತರ ಬಗ್ಗೆ ಕೇವಲ ಬೂಟಾಟಿಕೆ ಕಾಳಜಿ ಹೊಂದಿವೆ. ಕಾಂಗ್ರೆಸ್‌ಗೆ ದಲಿತರ ಏಳಿಗೆ ಬಗ್ಗೆ ಮನಸ್ಸಿದ್ದರೆ, ತಮಗೆ ದೊರೆತ 60 ವರ್ಷಗಳ ಅಧಿಕಾರಾವಧಿಯಲ್ಲಿ ಸಂಪೂರ್ಣವಾಗಿ ಅವರ ಏಳಿಗೆಗೆ ಕೊಡುಗೆ ನೀಡಬಹುದಿತ್ತು.
ಬದಲಿಗೆ ಅವರು ದಲಿತರನ್ನು ಕೇವಲ ಮತ ಬ್ಯಾಂಕ್‌ಗಾಗಿ ಬಳಸಿಕೊಂಡರು. ಹಾಗಾಗಿಯೇ ಅವರ ಸ್ಥಿತಿ ಸುಧಾರಿಸಿಲ್ಲ, ಈಗ ಬಿಜೆಪಿಯು ಅದನ್ನೇ ಮಾಡುತ್ತಿದೆ ಕೇವಲ ಓಲೈಸುವ ಕಾರ್ಯ ಮಾಡುತ್ತಿದ್ದಾರೆ ಆವತ್ತು ಕಾಂಗ್ರೆಸ್ಸಿನವರು ಬಾಬಾಸಾಹೇಬ ಅಂಬೇಡ್ಕರ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು ಇಂದು ಮಲ್ಲಿಕಾರ್ಜುನ ಖರ್ಗೆ ವರನ್ನು ಮುಖ್ಯ ಮಂತ್ರಿಯ ಮಾಡಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ಸಿನ ದಲಿತರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಟೀಕಿಸಿದರು.
![]() |
![]() |
![]() |
![]() |
![]() |
[ays_poll id=3]