This is the title of the web page
This is the title of the web page
Local NewsPolitics NewsVideo News

BJP : ಒಂದೆಡೆ ಚಿಂತನ ಸಭೆ ಮತ್ತೊಂದೆಡೆ ಪ್ರಮುಖ ಕಾರ್ಯಕರ್ತರ ಸಭೆ : ಕಾರ್ಯಕರ್ತರ ಗೊಂದಲ..


K2kannadanews.in

Political News ರಾಯಚೂರು : ಬಿಜೆಪಿಯಲ್ಲಿ (BJP) ರಾಯಚೂರು ಲೋಕಸಭೆ ಕ್ಷೇತ್ರದ (Raichur Lok Sabha Constituency) ಅಭ್ಯರ್ಥಿ ಹೆಸರು ಘೋಷಣೆಯಾಗುತ್ತಿದ್ದಂತೆ, ಟಿಕೆಟ್ (Ticket) ನಿಂದ ವಂಚಿತರಾದ ಅಭ್ಯರ್ಥಿಗಳ ನಡೆ, ಇಡಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ (Confusion) ಉಂಟುಮಾಡುತ್ತಿದೆ.

ಹೌದು ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಲ್ಲಿ ಮೂರು ಅಭ್ಯರ್ಥಿಗಳ (3 candidates) ನಡುವೆ ಟಿಕೆಟ್ ಗಾಗಿ ಪೈಪೋಟಿ ನಡೆದಿತ್ತು (Fight for ticket). ಹಾಲಿ ಸಂಸದ ಅಮರೇಶ್ವರ ನಾಯಕ್, ಮಾಜಿ ಸಂಸದ ಬೇವಿನಾಯಕ್ ಮತ್ತು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ನಡುವೆ ಟಿಕೆಟ್ ಗಾಗಿ ಭಾರಿ ಪೈಪೋಟಿ ನಡೆದಿತ್ತು. ಈ ಒಂದು ಪೈಪೋಟಿಯಲ್ಲಿ (Computation) ಕೊನೆಗೂ ಬಿಜೆಪಿ ಹೈಕಮಾಂಡ್ (High command) ಹಾಲಿ ಸಂಸದರ ಹೆಸರನ್ನು ಎತ್ತಿ ಹಿಡಿದು ಘೋಷಣೆ ಮಾಡಿತು. ಹಾಗೆ ಸಂಸದರ ಹೆಸರು ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಒಂದು ಕಡೆ ಮಾಜಿ ಸಂಸದ ಬಿ ವಿ ನಾಯಕ (B V Nayak)ಅವರ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿದ್ದರೆ ಇನ್ನೊಂದು ಕಡೆ ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ (Thipparaju hawaldar) ಬೆಂಬಲಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರೊಂದಿಗೆ (Workers) ಚರ್ಚೆ (Discuss) ಮಾಡಲು ನಾಳೆ ಬೇಬಿ ನಾಯಕ್ ಮತ್ತು ಅವರ ಬೆಂಬಲಿಗರು ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು, ರಾಯಚೂರು – ಯಾದಗಿರಿ ಲೋಕಸಭಾ ಕ್ಷೇತ್ರದ ಪ್ರಮುಖರ ಚಿಂತನಾ ಸಭೆಯನ್ನ ಕರೆದಿದ್ದಾರೆ. ಇನ್ನೊಂದು ಕಡೆ ಮಾರ್ಚ್ 29ರಂದು ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಅವರು ಕೂಡ ಪ್ರಮುಖ ಕಾರ್ಯಕರ್ತರ ಸಭೆಯನ್ನು ಕರೆದು ಮುಂದಿನ ನಿರ್ಧಾರ ಚರ್ಚಿಸಲಿದ್ದಾರೆ.

ಟಿಕೆಟ್ ವಂಚಿತ ನಾಯಕರ ನಡೆಯಿಂದ ಜಿಲ್ಲಾ ಮತ್ತು ರಾಜ್ಯ ಮುಖಂಡರಿಗೆ ತೆಲೆ ಬಿಸಿ ಆರಂಭವಾಗಿದೆ. ನಾಯಕರುಗಳ ಒಳ ಜಗಳದಿಂದ ಕ್ಷೇತ್ರದ ಕಾರ್ಯಕರ್ತರಲ್ಲೂ ಕೂಡ ಗೊಂದಲದ ವಾತಾವರಣ ಏರ್ಪಟ್ಟಿದ್ದು ಯಾರ ಪರ ನಿಲ್ಲಬೇಕು ಎಂಬುದೇ ಪ್ರಶ್ನೆಯಾಗಿ ಕಾಡುತ್ತಿದೆ.


[ays_poll id=3]