This is the title of the web page
This is the title of the web page
Education News

ಸಿಇಟಿ ಪರೀಕ್ಷೆ ಪ್ರವೇಶ ಪತ್ರ, ಈಗಲೇ ಡೌನ್‌ಲೋಡ್‌ ಮಾಡಿಕೊಳ್ಳಿ..!

Oplus_0

K2kannadanews.in

Karnataka CET 2024 : ರಾಜ್ಯದಲ್ಲಿ ಇಂಜಿನಿಯರಿಂಗ್‌ (Engineering) ಸೇರಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಏಪ್ರಿಲ್ 18, 19, 20ರಂದು ನಡೆಯುವ ಸಿಇಟಿ (Karnataka CET 2024) ಪರೀಕ್ಷೆಗೆ ಪ್ರವೇಶ ಪತ್ರ (Hall ticket) ಬಿಡುಗಡೆ ಮಾಡಲಾಗಿದೆ. ಪ್ರವೇಶ ಪತ್ರವನ್ನು ಅಭ್ಯರ್ಥಿಗಳು ಇದೀಗ ಪಡೆದುಕೊಳ್ಳಬಹುದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವತಿಯಿಂದ ಏಪ್ರಿಲ್ 18 ಮತ್ತು 19ರಂದು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (common entrance test) ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗೆ 3.28 ಲಕ್ಷ ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಏಪ್ರಿಲ್ 20ರಂದು ಕನ್ನಡ ಭಾಷಾ ಪರೀಕ್ಷೆಗೂ ಈ ಪ್ರವೇಶ ಪತ್ರ ಅನ್ವಯವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಪ್ರವೇಶ ಪತ್ರ ಡೌನ್‌ಲೋಡ್ ಹೀಗೆ ಮಾಡಿ

* ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.
* ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ (https://kea.kar.nic.in) ಗೆ ಭೇಟಿ ನೀಡಿ
* ಅಡ್ಮಿಷನ್‌ ಟಿಕೆಟ್‌ ಡೌನ್‌ಲೋಡ್‌ ಮಾಡಲು ನಿಗದಿತ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
* ತೆರೆದುಕೊಳ್ಳುವ ಪುಟದಲ್ಲಿ ಅರ್ಜಿ ಸಂಖ್ಯೆ, ಅರ್ಜಿದಾರರ ಮೊದಲ ಹೆಸರು (ಮೊದಲ ಐದು ಅಕ್ಷರಗಳು) ಮತ್ತು ಜನ್ಮ ದಿನಾಂಕ ನಮೂದಿಸಬೇಕು.
* ಆಗ ಸಿಇಟಿ 2024ರ ಪ್ರವೇಶ ಪತ್ರ ತೆರೆದುಕೊಳ್ಳುತ್ತದೆ.
* ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು, ಪರೀಕ್ಷೆಯ ಸಂದರ್ಭದ ಬಳಕೆಗಾಗಿ ಪ್ರಿಂಟ್ ತೆಗೆದು ಇರಿಸಿಕೊಳ್ಳಬಹುದು.


[ays_poll id=3]