This is the title of the web page
This is the title of the web page
State NewsVideo News

ವಿವಿಧ ಚೆಕ್ ಪೋಸ್ಟ್ ಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8 ಲಕ್ಷ 30 ಸಾವಿರ ಹಣ ವಶ..


K2kannadanews.in

Election News ರಾಯಚೂರು : ವಿವಿಧ ಚೆಕ್ ಪೋಸ್ಟ್ (check posts)ಗಳಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ, 8 ಲಕ್ಷ 30 ಸಾವಿರ ಹಣವನ್ನ (Money) ವಶಪಡಿಸಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠ (SP) ಅಧಿಕಾರಿ ನಿಖಿಲ್ ಬಿ ಅವರು ಹೇಳಿದರು.

ಲೋಕಸಭಾ ಚುನಾವಣೆ ನೀತಿ ಸಂಹಿತೆ (code of conduct) ಹಿನ್ನೆಲೆ ರಾಯಚೂರು ಜಿಲ್ಲೆಯಾದ್ಯಂತ 23 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ರಾಯಚೂರು (Raichur) ತಾಲೂಕಿನ ಸಿಂಗನೋಡಿ (Singanodi) ಚೆಕ್ ಪೋಸ್ಟ್ ನಲ್ಲಿ 4 ಲಕ್ಷ ರೂ (4 lake) ಹಣ, ಯರಗೇರಾ (Yaragera) ಚೆಕ್ ಪೋಸ್ಟ್ ನಲ್ಲಿ 1 ಲಕ್ಷ 30 ಸಾವಿರ ಮತ್ತು ಸಿಂಧನೂರು (Sindhanur) ತಾಲೂಕಿನ ಮಣ್ಣಿಕೆರೆ ಕ್ಯಾಂಪಿನಲ್ಲಿ 3 ಲಕ್ಷ. (3lak) ಯಾವುದೆ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ವೇಳೆ ತಪಾಸಣೆa ಮಾಡಿ ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಪ್ರತಿನಿತ್ಯವೂ ಕೂಡ ಅಕ್ರಮ ಮಧ್ಯ (Illegal liquor) ವಿಚಾರಕ್ಕೆ ಸಂಬಂಧಿಸಿದಂತೆ ಸತತ ದಾಳಿಗಳು ನಡೆಯುತ್ತಿದೆ ಎಂದು ಎಸ್ಪಿ ತಿಳಿಸಿದರು.

ವಿವಿಧ ಇಲಾಖೆಗಳ ಸಹಯೋಗದಲ್ಲಿ ತಂಡಗಳನ್ನು (Team) ರಚಿಸಿದ್ದು, ಯಾವುದೇ ರೀತಿಯಾದಂತಹ ಅಕ್ರಮ ಹಣ ಮತ್ತು ಮಧ್ಯ ಸಾಗಿಸಿದಂತೆ ಹದಿನ ಕಣ್ಣು (Eagle eyes) ನಿಗವಹಿಸಿದ್ದು, ಯಾವುದೇ ಅಕ್ರಮ ಕಂಡುಬಂದಲ್ಲಿ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.


[ays_poll id=3]