
ಸಿಂಧನೂರು : ನಿರ್ಲಕ್ಷ್ಯ ಹಾಗೂ ವೇಗವಾಗಿ ಕಾರು ಚಲಾಯಿಸಿದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಭತ್ತದ ಗದ್ದೆಗೆ ನುಗ್ಗಿದ ಘಟನೆ ಮಣಿಕೇರಿ ಕ್ಯಾಂಪ್‌ನ ಗಾಳಿ ದುರ್ಗಮ್ಮ ದೇವಸ್ಥಾನದ ಹತ್ತಿರ ನಡೆದಿದೆ.
ಸಿಂಧನೂರು ತಾಲೂಕಿನ ಮಣಿಕೇರಿ ಕ್ಯಾಂಪ್‌ನ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿ ಘಟನೆ ನಡೆದಿದೆ. ಅದೃಷ್ಟಾವಶಾತ್ ತಾಲ್ಲೂಕಿನ ರಾಗಲಪರ್ವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಹಾಗೂ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೈದ್ಯ ಡಾ.ದಿಗ್ವಿಜಯ ಹಾಗೂ ಲ್ಯಾಬ್ ಟೆಕ್ನಿಷಿಯನ್ ಶಂಭುಲಿಂಗಯ್ಯ ಕಾರಿನಲ್ಲಿ ಸಿಂಧನೂರು ಮಾರ್ಗವಾಗಿ ರಾಗಲಪರ್ವಿಗೆ ತೆರಳುವ ಸಮಯದಲ್ಲಿ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ ಹಿನ್ನೆಲೆ ಮಣಿಕೇರಿ ಕ್ಯಾಂಪ್‌ನ ಗಾಳಿ ದುರ್ಗಮ್ಮ ದೇವಸ್ಥಾನದ ಹತ್ತಿರ ಕಾರು ಪಲ್ಟಿಯಾಗಿ ಭತ್ತದ ಗದ್ದೆಗೆ ಉರುಳಿದೆ. ಸಾರ್ವಜನಿಕರು ತಕ್ಷಣವೇ ಕಾರಿನಿಂದ ವೈದ್ಯ ಹಾಗೂ ಅವರ ಸಿಬ್ಬಂದಿಯನ್ನು ಹೊರ ತೆಗೆದರು. ನಂತರ ವೈದ್ಯರ ಸಂಬಂಧಿಕರು ಬಂದು ಕಾರಿನಲ್ಲಿ ಸಿಂಧನೂರು ನಗರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
![]() |
![]() |
![]() |
![]() |
![]() |
[ays_poll id=3]