This is the title of the web page
This is the title of the web page
Crime News

ಬಹು ಕೋಟಿ ವಂಚನೆ: ಕಾಲ್‌ ಸೆಂಟರ್‌ ನ 200 ಮಂದಿ ಅರೆಸ್ಟ್


K2 ನ್ಯೂಸ್ ಡೆಸ್ಕ್ : ದೇಶ, ವಿದೇಶಗಳಲ್ಲಿ ಸಾವಿರಾರು ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿದ 8 ಅಕ್ರಮ ಕಾಲ್‌ ಸೆಂಟರ್‌ ಜಾಲವನ್ನು ಭೇದಿಸಿರುವ ಪೊಲೀಸರು 200 ಮಂದಿಯನ್ನು ಬಂಧಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ತಾಂತ್ರಿಕ ನೆರವು ಕೊಡುತ್ತೇವೆ ಎಂದು ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಕಾಲ್‌ ಸೆಂಟರ್‌ ಗಳ ಮೂಲಕ ವಂಚಿಸಲಾಗುತ್ತಿತ್ತು. ಜಾಲದ ಹಿಂದೆ ಮೂವರು ಮಾಸ್ಟರ್‌ ಮೈಂಡ್‌ ಗಳಿದ್ದು, 191 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಅಸ್ಸಾಂ ಕ್ರೈಂ ಬ್ರಾಂಚ್‌ ಪೊಲೀಸರು ಹಾಗೂ ಗುವಾಹತಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹಲವು ಕಡೆ ದಾಳಿ ನಡೆಸಿದಾಗ ಅಕ್ರಮವಾಗಿ 8 ಕಾಲ್‌ ಸೆಂಟರ್‌ ಗಳು ಕಾರ್ಯಾಚರಣೆ ನಡೆಸುತ್ತಿರುವುದು ಪತ್ತೆಯಾಗಿದೆ. ಬಿಟ್‌ ಕಾಯಿನ್‌ ಮತ್ತು ಹವಾಲಾ ಮೂಲಕ ಅಕ್ರಮ ಹಣವನ್ನು ಬೇರೆಡೆಗೆ ವರ್ಗಾಯಿಸುತ್ತಿದ್ದರು. ಈ ಜಾಲ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ವಿವಿಧೆಡೆಯಿಂದ ನೌಕರರು ಈ ಕಾಲ್‌ ಸೆಂಟರ್‌ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.


[ays_poll id=3]