
ಲಿಂಗಸುಗೂರು : ತಾಂತ್ರಿಕ ದೋಷ ಹಿನ್ನೆಲೆ ಟ್ರಾನ್ಸ್ಫಾರ್ಮರ್ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆ ಗೌಡೂರು ಗ್ರಾಮದಲ್ಲಿ ಜರುಗಿದ್ದು ಕೆಲ ಹೊತ್ತು ಗ್ರಾಮದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದಲ್ಲಿ ಘಟನೆ ಜರುಗಿದ್ದು, ತಾಂತ್ರಿಕ ದೋಷ ಹಿನ್ನೆಲೆ ಬೆಂಕಿ ಹತ್ತಿದ್ದರಿಂದ ಪರಿವರ್ತಕ ಸ್ಫೋಟಗೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಸುಮಾರು ಅರ್ಧ ಗಂಟೆ ಕಾಲ ಹೊತ್ತಿ ಉರಿದ ವಿದ್ಯುತ್ ಪರಿವರ್ತಕದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ ಹಾಗೂ ಟಿ.ಸಿ ಸ್ಫೋಟದಿಂದ ಸ್ಥಳೀಯರಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಉಂಟಾಗಿತ್ತು. ಅದೃಷ್ಟಾವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
![]() |
![]() |
![]() |
![]() |
![]() |
[ays_poll id=3]