This is the title of the web page
This is the title of the web page
Crime NewsLocal NewsVideo News

ಲಾಡ್ಜ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ..!


K2kannadanews.in

Crime ನ್ಯೂಸ್ : ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿನ(station road) ಲಾಡ್ಜವೊಂದರಲ್ಲಿ(Lodge) ನೇಣು ಬಿಗಿದ(Hanging) ಸ್ಥಿತಿಯಲ್ಲಿ ಗೃಹಿಣಿ ಶವ(Housewife dead) ಪತ್ತೆಯಾಗಿದೆ.

ಉತ್ತರಪ್ರದೇಶದ(uthara Pradesh’s) ನಗಲಬಾರಿ ಜಿಲ್ಲಾ ಅತ್ರಾಸ್(atras) ಮೂಲದ 23 ವರ್ಷದ ಸೋನಿ(soni)1 ಮೃತ ಮಹಿಳೆ. ಇಲ್ಲಿನ ಸಂತೋಷಿ ಸರೋವರ ಲಾಡ್ಜ್ ನಲ್ಲಿ ಘಟನೆ ನಡೆದಿದ್ದು, ಮೃತಳ ಪತಿ ಅವಿನಾಶ್ ಇದೇ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಲಾಡ್ಜ್ ನ ರೂಂ ನಂಬರ್ 113 ರಲ್ಲಿ ಘಟನೆ ನಡೆದಿದ್ದು, ದಂಪತಿ ಇದೇ ರೂಂ ನಲ್ಲಿ ವಾಸವಾಗಿದ್ದರು. ಒಂದು ವರ್ಷದ ಹಿಂದೆ ಮದುವೆಯಾಗಿದ್ದು 20 ದಿನಗಳ ಕೆಳಗೆ ಮಹಿಳೆಗೆ ಹೆರಿಗೆಯಾಗಿತ್ತು. ಸಿಸರಿನ್ ಆಗಿದ್ದರಿಂದ ಮಹಿಳೆ ರೂಂ‌ನಲ್ಲೇ ಇರುತ್ತಿದ್ದಳು.

ಇಂದು ಬೆಳಗಿನ ಜಾವ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದಾಳೆ. ಬೆಳಿಗ್ಗೆ ಎದ್ದಾಗ ಪತ್ನಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ತಿಳಿದು ಬಂದಿದೆ ಅಂತ ಹೇಳಿದ್ದಾನೆ. ತಾಯಿ ಸಾವಿನಿಂದ 20 ದಿನದ ಮಗು ತಬ್ಬಲಿಯಾಗಿದೆ. ಸ್ಥಳಕ್ಕೆ ರಾಯಚೂರು ಎಸ್.ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತಳ ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ಸೋನಿ ಪತಿ ಅವಿನಾಶ್‌ನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.


[ays_poll id=3]