This is the title of the web page
This is the title of the web page
Politics NewsState NewsVideo News

ಸಂಸದರ ವಿರುದ್ಧ ಬಿಜೆಪಿ ಕಾರ್ಯಕರ್ತರ ಅಸಮಧಾನ : ಚಪ್ಪಲಿಲಿ ಹೊಡಿತೀವಿ ಎಂದು ಆಕ್ರೋಶ…


K2kannadanews.in

Political News ರಾಯಚೂರು : ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿದ ಅಭ್ಯರ್ಥಿಗಳ ಹಿಂಬಾಲಕರ ಅಸಮಧಾನ ಗಡಿ ದಾಟಿದೆ. ಬಿ ವಿ ನಾಯಕ್​(B.V. Nayak) ಬಂಡಾಯ ಶಮನಕ್ಕೆ ಬಿಜೆಪಿ ಪ್ರಮುಖರು ನಡೆಸಿದ್ದ ಸಭೆಯಲ್ಲಿ ಕ್ಷೇತ್ರದ ಪ್ರಭಾರಿ ದೊಡ್ಡನಗೌಡ ಪಾಟೀಲ್ ಎದುರಲ್ಲೇ ಹಾಲಿ ಸಂಸದರ ವಿರುದ್ಧ ಕಾರ್ಯಕರ್ತರು ನಾಲಿಗೆ ಹರಿಬಿಟ್ಟಿದ್ದಾರೆ.

ರಾಯಚೂರು ಲೋಕಸಭಾ ಟಿಕೆಟ್​(Raichur lok sabha) ಆಕಾಂಕ್ಷಿಯಾಗಿದ್ದ ಬಿವಿ ನಾಯಕ್ ಅವರಿಗೆ ಟಿಕೆಟ್​ ನೀಡದೆ, ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್​ಗೆ ಟಿಕೆಟ್​ ನೀಡಲಾಗಿದೆ. ಇದರಿಂದ ಬಿಜೆಪಿಯಲ್ಲಿಯೇ ಅಸಮಾಧಾನ ಬುಗಿಲೆದ್ದಿದೆ, ಇಂದು ಬಿವಿ ನಾಯಕ್​(B. V. Nayak) ಬಂಡಾಯ ಶಮನಕ್ಕೆ ಬಿಜೆಪಿ ಪ್ರಮುಖರು ನಡೆಸಿದ್ದ ಸಭೆಯಲ್ಲಿ ಪ್ರಭಾರಿ ದೊಡ್ಡನಗೌಡ ಪಾಟೀಲ್ ಮುಂದೆಯೇ ಕಾರ್ಯಕರ್ತರು ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್​ಗೆ ಚಪ್ಪಲಿಲಿ ಹೊಡಿತಿವಿ ಎಂದು ಕಾರ್ಯಕರ್ತರು ಆಕ್ರೋಶ ಹೊರ ಹಾಕಿ ಆಕ್ರೋಷ ಹೊರಹಾಕಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಒಂದುವರೆ ಲಕ್ಷ ಮತಗಳಿಂದ ಬಿವಿ ನಾಯಕ್ ಸೋತಿದ್ದರು. ಈಗ ಟೆಕೆಟ್ ಕೇಳೋಕೆ ಬಂದಿದ್ದಾರೆ ಎಂದು ಹಾಲಿ ಸಂಸದ ಹೇಳಿದ್ದಾರೆ. ಆದರೆ, ಇಂದಿರಾ ಗಾಂಧಿ ಕಾಲದಲ್ಲಿ ಕತ್ತೆ ನಿಂತ್ರೆ ಕತ್ತೆ ಗೆಲ್ತಿತ್ತು. ಈಗ ಮೋದಿ ಕಾಲದಲ್ಲಿ ಕತ್ತೆ ನಿಂತ್ರೆ ಕತ್ತೆ ಗೆಲ್ಲತ್ತೆ. ಹಾಲಿ ಸಂಸದ ಕಳೆದ ಬಾರಿ ಮೋದಿ ಹೆಸರಿನಲ್ಲಿ ಗೆದ್ದಿದ್ದರು, ಈಗ ಹಳ್ಳಿಗಳಿಗೆ ಬರ್ಲಿ ಚಪ್ಪಲೀಲಿ ಹೊಡಿತಿವಿ ಎಂದು ಹಾಲಿ ಸಂಸದರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


[ays_poll id=3]