This is the title of the web page
This is the title of the web page
Politics News

ಜಾತಿಗಳ ಮಧ್ಯೆ ಜಗಳ ಹಚ್ಚುತ್ತಿರುವ BJP ಅಧಿಕಾರದಿಂದ ಇಳಿಬೇಕು


ರಾಯಚೂರು : ದೇಶದಲ್ಲಿ ಜಾತಿ ಜಾತಿಗಳ ಮಧ್ಯ ಜಗಳ ಹಚ್ಚುತ್ತಿರುವ, ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ಕೆಲಸಗಳನ್ನು ಮಾಡುತ್ತಿರುವಂತಹ ಕೇಂದ್ರ ಬಿಜೆಪಿ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಅಸಮಾಧಾನ ವ್ಯಕ್ತಪಡಿಸಿದರು.

 

ರಾಯಚೂರು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಿಟಿಜನ್ ಫಾರ್ ಡೆಮಾಕ್ರಸಿ ಮತ್ತು ಜನಂದೋಲನ ಮಹಾ ಮೈತ್ರಿ ದೇಶದ ಬಡವರ ಪರವಾಗಿ ನ್ಯಾಯಕ್ಕಾಗಿ ಹೋರಾಡುತ್ತಿದೆ ಅವರ ಪರವಾಗಿ ಕೆಲಸ ಮಾಡುತ್ತಿದ್ದೇನೆ ಹೊರತು ಯಾವುದೇ ಪಕ್ಷಗಳ ಪರವಾಗಿ ಅಲ್ಲ. 1977 ರಲ್ಲಿ ಕಾಂಗ್ರೆಸ್ ಸರ್ಕಾರ ಮಾಡಬರದನ್ನ ಮಾಡಿದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸಂಜಯ್ ಗಾಂಧಿ ಅವರನ್ನು ಸೇರಿಸಿ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸಿತ್ತು ಈ ಒಂದು ಪ್ರಜಾಪ್ರಭುತ್ವ.

ಅದೇ ರೀತಿಯಾಗಿ ಇದೀಗ ಬಿಜೆಪಿ ಕೇಂದ್ರ ಸರ್ಕಾರ ರೈತ ವಿರೋಧಿ, ರೈತ ಕಾರ್ಮಿಕ, ಮಹಿಳೆಯರ, ಜಾತಿ ಜಾತಿಗಳ ಮಧ್ಯ, ಧರ್ಮ ಧರ್ಮದ ಮಧ್ಯೆ ವಿಷದ ಬೀಜ ಬಿತ್ತುತ್ತಿರುವ ಬಿಜೆಪಿ ಸರ್ಕಾರ ಖಂಡಿತವಾಗಿ ಅಧಿಕಾರದಿಂದ ಇಳಿಯಬೇಕು. ಸಾರ್ವಜನಿಕರ ಸೇವಕರಾಗಿರುವ ಜನಪ್ರತಿನಿಧಿಗಳಿಗೆ, ನಾವು ಸಂವಿಧಾನದ ಚೌಕಟ್ಟಿನಲ್ಲಿ ಐದು ವರ್ಷ ಅಧಿಕಾರ ನಡೆಸಲು ಅಧಿಕಾರ ನೀಡಿರುತ್ತೇವೆ. ಅದನ್ನು ನಿಭಾಯಿಸದಿದ್ದರೆ ಅವರನ್ನು ಅಧಿಕಾರದಿಂದ ಇಳಿಸುವುದು ಖಂಡಿತ ಎಂದು ಅಸಮಾಧಾನ ಹೊರ ಹಾಕಿದರು.


[ays_poll id=3]